ಕರ್ನಾಟಕ

karnataka

ETV Bharat / bharat

ರಸ್ತೆ ಅಪಘಾತ: ಆಸ್ಟ್ರೇಲಿಯಾದಲ್ಲಿ ತೆಲಂಗಾಣ ಮೂಲದ ಯುವತಿ ದುರ್ಮರಣ - ತೆಲಂಗಾಣ ಇತ್ತೀಚಿನ ಸುದ್ದಿ

ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದ ಯುವತಿಯೋರ್ವಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.

Road accident
Road accident

By

Published : Jan 2, 2021, 2:54 PM IST

ಹೈದರಾಬಾದ್:ತೆಲಂಗಾಣದ ನಾಗರಕರ್ನೂಲ್​ ಜಿಲ್ಲೆಗೆ ಸೇರಿದ್ದ ಯುವತಿಯೋರ್ವಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆಸ್ಟ್ರೇಲಿಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

22 ವರ್ಷದ ರಕ್ಷಿತಾ ಸಾವನ್ನಪ್ಪಿರುವ ಯುವತಿ. ಡಿಸೆಂಬರ್​ 31ರಂದು ಸ್ಕೂಟಿ ಮೇಲೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆಂದು ವೈದ್ಯರು ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ

ತೆಲಂಗಾಣ ಮೂಲದ ರಕ್ಷಿತಾ ಆಸ್ಟ್ರೇಲಿಯಾದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ತಂದೆ ವೆಂಕಟ ರೆಡ್ಡಿ ಆರ್ಮಿ ಆಫೀಸರ್​ ಆಗಿದ್ದು, ಹೈದರಾಬಾದ್​ನಲ್ಲಿ ನೆಲೆಸಿದ್ದಾರೆ. ಇನ್ನು ಮೃತ ಮಗಳ ಅಂಗಾಗ ದಾನ ಮಾಡಲು ಪೋಷಕರು ಮುಂದಾಗಿದ್ದಾರೆ. ಕಳೆದ ವರ್ಷ ನವೆಂಬರ್​ 19ರಂದು ರಕ್ಷಿತಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಳು.

ABOUT THE AUTHOR

...view details