ಕರ್ನಾಟಕ

karnataka

ETV Bharat / bharat

ಈ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೈನ್​ ವುಮನ್​ ನೇಮಕ

ದಸರಾ ಉಡುಗೊರೆಯಾಗಿ ಅಕ್ಟೋಬರ್ 13 ರಂದು ನಾಮನಿರ್ದೇಶಿತರಿಗೆ ನೇಮಕಾತಿ ಪತ್ರವನ್ನು ಟ್ರಾನ್ಸ್‌ಕೋ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಇದರಲ್ಲಿ 684 ಜನರಲ್ಲಿ 199 ಮಹಿಳೆಯರು ಆಯ್ಕೆಯಾಗಿದ್ದಾರೆ ಎಂದು ಟ್ರಾನ್ಸ್‌ಕೋ ನಿರ್ದೇಶಕರು ತಿಳಿಸಿದ್ದಾರೆ.

By

Published : Oct 26, 2021, 5:19 PM IST

Updated : Oct 26, 2021, 6:35 PM IST

Telangana Women Makes History... Got junior Linemen posts for the first time..
ತೆಲಂಗಾಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೈನ್​ ವುಮನ್​ ನೇಮಕ

ಹೈದರಾಬಾದ್​ : ವಿದ್ಯುತ್ ನಿಗಮದದಲ್ಲಿ ಕೆಲಸಕ್ಕೆ ಸೇರಬೇಕು ಎಂದರೆ ತುಂಬಾನೆ ಆತ್ಮಸ್ಥೈರ್ಯ ಇರಬೇಕು. ಅದು ಸಾವು ಬದುಕಿನ ಜೊತೆ ಮಾಡುವ ಕೆಲಸ. ಈ ಕಾರಣಕ್ಕಾಗಿಯೇ ಬಹಳಷ್ಟು ಜನ ಈ ನಿಗಮದಲ್ಲಿ ಕೆಲಸ ಮಾಡಲು ಹಿಂದು ಮುಂದು ನೋಡುತ್ತಾರೆ. ಆದರೆ, ಇದಕ್ಕೆ ವಿರುದ್ಧವಾಗಿ ತಾವು ಏನು ಬೇಕಾದರೂ ಮಾಡುತ್ತೇವೆ ಎಂಬಂತೆ ಈ ಕೆಲಸಕ್ಕೆ ಮಹಿಳೆಯರೂ ಸೇರಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ತೆಲಂಗಾಣದ ಈ ಲೈನ್ ವುಮೆನ್​ಗಳು ಸಾಕ್ಷಿ. ತೆಲಂಗಾಣ ಟ್ರಾನ್ಸ್‌ಕೋ ಮೊದಲ ಬಾರಿಗೆ 2017 ರಲ್ಲಿ ಜೂನಿಯರ್ ಲೈನ್‌ಮೆನ್ ಹುದ್ದೆಗಳಿಗೆ ಮಹಿಳೆಯರನ್ನು ಪರಿಚಯಿಸಿತು. ITI ಎಲೆಕ್ಟ್ರಿಕಲ್ ಪೂರ್ಣಗೊಳಿಸಿದ ಅನೇಕ ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

ನೇಮಕಾತಿ ಹಂತದಲ್ಲಿ ಅನೇಕ ಅಡೆತಡೆಗಳ ನಡುವೆಯೂ, ಹಿಂಜರಿಕೆಯಿಲ್ಲದೇ ಎತ್ತರದ ವಿದ್ಯುತ್ ಟವರ್‌ಗಳನ್ನು ಏರಿದ್ದರು. ಹಾಗೆ ಅಂತಿಮ ಪರೀಕ್ಷೆಯಲ್ಲಿ ಆಯ್ಕೆ ಕೂಡ ಆದರು. ಆದರೆ, ನ್ಯಾಯಾಲಯದ ಪ್ರಕರಣಗಳೊಂದಿಗೆ ಮೂರು ವರ್ಷಗಳ ವಿಳಂಬದ ಹೊರತಾಗಿಯೂ, ಅವರ ನಿರೀಕ್ಷೆಗಳು ಅಂತಿಮವಾಗಿ ಫಲ ನೀಡಿವೆ.

ದಸರಾ ಉಡುಗೊರೆಯಾಗಿ ಅಕ್ಟೋಬರ್ 13 ರಂದು ನಾಮನಿರ್ದೇಶಿತರಿಗೆ ನೇಮಕಾತಿ ಪತ್ರವನ್ನು ಟ್ರಾನ್ಸ್‌ಕೋ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಇದರಲ್ಲಿ 684 ಜನರಲ್ಲಿ 199 ಮಹಿಳೆಯರು ಆಯ್ಕೆಯಾಗಿದ್ದಾರೆ ಎಂದು ಟ್ರಾನ್ಸ್‌ಕೋ ನಿರ್ದೇಶಕರು ತಿಳಿಸಿದ್ದಾರೆ.

ಈ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೈನ್​ ವುಮನ್​ ನೇಮಕ

ಇಲ್ಲಿಯವರೆಗೆ ಲೈನ್ ವುಮೆನ್ ಇರಲಿಲ್ಲ:

ತೆಲಂಗಾಣ ರಾಜ್ಯ ರಚನೆಯ ನಂತರ ಈವರೆಗೆ ಯಾವುದೇ ಲೈನ್​ ವುಮೆನ್​ ಇರಲಿಲ್ಲ. ಆದರೆ, ಈಗ ಈ ದಿಟ್ಟ ಮಹಿಳೆಯರು ಈ ಕೆಲಸಕ್ಕೆ ನೇಮಕಗೊಂಡಿದ್ದಾರೆ. ಭಾರತಿ ಅವರು ಅಕ್ಟೋಬರ್ 13 ರಂದು ವರಂಗಲ್ ಜಿಲ್ಲೆಯಲ್ಲಿ ನೇಮಕಾತಿ ಪತ್ರವನ್ನು ಸ್ವೀಕರಿಸಿದ್ದಾರೆ.

ಆಕೆಯ ತವರು ಮಹಬೂಬಾಬಾದ್ ಜಿಲ್ಲೆ. ಅವರು 2016 ರಲ್ಲಿ ITI ಎಲೆಕ್ಟ್ರಿಕಲ್ ಅನ್ನು ಪೂರ್ಣಗೊಳಿಸಿ, ತನ್ನ ಗಂಡನ ಸಹಾಯದಿಂದ ಹಳ್ಳಿಯಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದರು. ನಂತರ ಅವರು ಕಂಬಗಳನ್ನು ಏರಲು ಕಲಿತರು ಈ ಶ್ರಮ ಈಗ ಈ ಹುದ್ದೆಗೆ ಆಯ್ಕೆಯಾಗುವಂತೆ ಮಾಡಿದೆ.

ಭಾರತಿ ಅವರು ಮೂಲತಃ ಮಹಬೂಬಾಬಾದ್ ಜಿಲ್ಲೆಯ ಬೋಜ್ಯ ತಾಂಡಾ ತೋರೂರು ಮಂಡಲದಿಂದ ಬಂದವರು. ಅವರದು ಸಣ್ಣ ಕೃಷಿ ಕುಟುಂಬ. ಬಾಲ್ಯದಿಂದಲೇ ಅನೇಕ ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ, ತಮ್ಮ ಉನ್ನತ ವ್ಯಾಸಂಗಕ್ಕೆ ಯಾವುದೇ ಅಡೆತಡೆ ಇಲ್ಲದೇ ಮುಗಿಸಿದ್ದರು. 2012 ರಲ್ಲಿ ವಿವಾಹವಾದ ಇವರಿಗೆ ಈಗ ಇಬ್ಬರು ಮಕ್ಕಳು.

ಇನ್ನು ವರಂಗಲ್ ಜಿಲ್ಲೆಯ ನೆಕ್ಕೊಂಡ ಮಂಡಲದ ಮಡಿಪಲ್ಲಿ ಗ್ರಾಮದ ಭೂಕ್ಯ ಜ್ಯೋತಿ ತನ್ನ ಇಬ್ಬರು ಮಕ್ಕಳ ಪಾಲನೆ ಪೋಷಣೆ ಮಾಡುವ ವೇಳೆ ನೇಮಕಾತಿ ಪತ್ರ ಪಡೆದಿದ್ದಾರೆ. ಮಹಿಳೆಯರಿಗೆ ತಾರತಮ್ಯ ಮಾಡಬೇಡಿ. ಮಹಿಳೆಯರು ಎಲ್ಲ ಹಂತದಲ್ಲೂ ಸಾಧನೆ ಮಾಡಲು ಸೈ ಎಂದಿರುವ ಅವರು, ಲೈನ್‌ಮೆನ್ ಉದ್ಯೋಗಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಮುಖ್ಯಮಂತ್ರಿ ಕೆಸಿಆರ್‌ಗೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Last Updated : Oct 26, 2021, 6:35 PM IST

ABOUT THE AUTHOR

...view details