ಹೈದರಾಬಾದ್ (ತೆಲಂಗಾಣ):ದೇಶವೇ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದು, ಇದರಿಂದ ಹೊರಬರಲು ಇನ್ನಿಲ್ಲದ ಸರ್ಕಸ್ ನಡೆಸಿದೆ. ಪ್ರಮುಖವಾಗಿ ಲಾಕ್ಡೌನ್ ಹೇರಿಕೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಕಿರುಕುಳ ಹಾಗೂ ಡೈವೋರ್ಸ್ ಕೇಸ್ಗಳು ಹೆಚ್ಚಾಗಿ ಕಂಡು ಬಂದಿವೆ.
ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಅತಿ ಹೆಚ್ಚು ಕೌಟುಂಬಿಕ ಕಲಹದಂತಹ ಪ್ರಕರಣಗಳು ದಾಖಲಾಗಿದ್ದು, ಪ್ರಮುಖವಾಗಿ ಲೈಂಗಿಕ ಕಿರುಕುಳ ಹಾಗೂ ಡೈವೋರ್ಸ್ನಂತಹ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ. ಹೀಗಾಗಿ ಸಾಂಕ್ರಾಮಿಕವು ಮಹಿಳೆಯರು ಹಾಗೂ ಮಕ್ಕಳಿಗೆ ಹೊಸ ಸಂಕಷ್ಟ ತಂದಿಟ್ಟಿದೆ. ಇದರಿಂದ ಮಹಿಳೆಯರಿಗೆ ಆರೋಗ್ಯ ಕಾಳಜಿ ಮಧ್ಯೆ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.
ತೆಲಂಗಾಣದಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಗಂಡದಿರು, ಇತರ ಸದಸ್ಯರು ದಿನದ 24 ಗಂಟೆ ಮನೆಯಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಹೀಗಾಗಿ ಮಹಿಳೆಯರ ಮೇಲೆ ಅತಿಯಾದ ಕೆಲಸದ ಒತ್ತಡವಾಗುತ್ತಿದೆ. ಜತೆಗೆ ಗಂಡದಿರ ಕಿರುಕುಳ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳದಂತಹ ಪ್ರಕರಣ ಹೆಚ್ಚಾಗಿ ದಾಖಲಾಗಿವೆ.