ಹೈದರಾಬಾದ್:ತೆಲಂಗಾಣ ಸರ್ಕಾರಮೂರು ವರ್ಷಗಳ ಹಿಂದೆ ರೈತ ಬಂಧು ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆ ಮೂಲಕ ರೈತರ ಖಾತೆಗಳಿಗೆ 50,000 ಕೋಟಿ ರೂ.ಗಳನ್ನು ಜಮಾ ಮಾಡಿದೆ. ಈ ಹಿನ್ನೆಲೆ ಈ ವಾರ ಪೂರ್ತಿ ಆಚರಣೆಗೆ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕರೆ ನೀಡಿದೆ.
ಜನವರಿ 3 ರಿಂದ ಜನವರಿ 10 ರವರೆಗೆ ರಾಜ್ಯಾದ್ಯಂತ ರೈತ ಬಂಧು ಆಚರಣೆಯನ್ನು ಟಿಆರ್‌ಎಸ್ ಪಕ್ಷ ಆಯೋಜಿಸಿದೆ. ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಕೃಷಿ ಸಚಿವ ಸಿಂಗಿರೆಡ್ಡಿ ನಿರಂಜನ್ ರೆಡ್ಡಿ, ರೈತ ಬಂಧು ಸಮಿತಿ ಅಧ್ಯಕ್ಷ ಪಲ್ಲಾ ರಾಜೇಶ್ವರ್ ರೆಡ್ಡಿ ಅವರು ಭಾನುವಾರ ಟಿಆರ್‌ಎಸ್ ಶಾಸಕರು, ಸಂಸದರು, ಎಂಎಲ್‌ಸಿಗಳು, ಜಿಪಿಟಿಸಿಗಳು, ರೈತ ಬಂಧು ಸಮಿತಿಯ ಜಿಲ್ಲಾಧ್ಯಕ್ಷರೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿ ಮುಂದಿನ ಕ್ರಮಗಳ ಕುರಿತು ನಿರ್ದೇಶನ ನೀಡಿದರು. ಕೋವಿಡ್ ನಿರ್ಬಂಧಗಳನ್ನು ಅನುಸರಿ ಆಚರಣೆ ನಡೆಸುವಂತೆ ಸೂಚಿಸಿದರು.
ಓದಿ:ಅಳವಿನಂಚಿಲ್ಲಿದ್ದ ಮೆಕ್ಸಿಕನ್ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!
ರಾಮರಾವ್ ಎಂದೇ ಜನಪ್ರಿಯರಾಗಿರುವ ಕೆಟಿಆರ್, ರೈತ ಬಂಧುಗಳಂತಹ ಯೋಜನೆಯನ್ನು ದೇಶದ ಯಾವುದೇ ರಾಜ್ಯವು ತಂದಿಲ್ಲ ಎಂದು ಹೇಳಿದ್ದಾರೆ. ಟಿಆರ್‌ಎಸ್ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಈ ಬಗ್ಗೆ ಮಾತನಾಡಿ, ರೈತ ಸಮುದಾಯದ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. 70 ವರ್ಷಗಳ ಭಾರತೀಯ ಇತಿಹಾಸದಲ್ಲಿ ಇಂತಹ ಮಹತ್ತರವಾದ ಯೋಜನೆಯನ್ನು ಎಲ್ಲಿಯೂ ಪರಿಚಯಿಸಲಾಗಿಲ್ಲ ಎಂದು ಬಣ್ಣಿಸಿಕೊಂಡಿದ್ದಾರೆ.
ಕೃಷಿ ಕ್ಷೇತ್ರದ ಕಲ್ಯಾಣಕ್ಕಾಗಿ ಉಪಕ್ರಮಗಳ ಅನುಷ್ಠಾನಕ್ಕೆ ಬಂದಾಗ ತೆಲಂಗಾಣ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಖ್ಯಮಂತ್ರಿಗಳು ರೈತ ಬಂಧು, ರೈತ ಭೀಮಾ ಮುಂತಾದ ವಿವಿಧ ಯೋಜನೆಗಳನ್ನು ಪರಿಚಯಿಸಿದ್ದಾರೆ ಮತ್ತು ರಾಜ್ಯದಲ್ಲಿ ನೀರಾವರಿಗಾಗಿ ವ್ಯಾಪಕವಾಗಿ ನೀರನ್ನು ಒದಗಿಸುವ ಕಾಳೇಶ್ವರಂ ಯೋಜನೆಯನ್ನು ಸಹ ಕೊಟ್ಟಿದ್ದಾರೆ ಎಂದು ಕೆಟಿಆರ್ ಹೇಳಿದರು.