ಹೈದರಾಬಾದ್: ತೆಲಂಗಾಣದಲ್ಲಿ ಕೋವಿಡ್ ಲಾಕ್ಡೌನ್ ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ಎಲ್ಲಾ ಸೇವೆಗಳು ಲಭ್ಯವಾಗಲಿವೆ. ಅಂತಾರಾಜ್ಯ ಬಸ್ ಸೇವೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆಯಿಂದಲೇ ಸಂಚಾರ ಸೇವೆ ಪುನಾರಂಭವಾಗಲಿದೆ. ತೆಲಂಗಾಣದಿಂದ ಆಂಧ್ರಕ್ಕೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಸ್ ಸೇವೆ ನೀಡಲು ನಿರ್ಧರಿಸಿದೆ.
ಇತ್ತ ಕರ್ನಾಟಕಕ್ಕೂ ಬಸ್ ಸೇವೆ ಆರಂಭಗೊಳ್ಳುತ್ತಿದೆ. ಕರ್ನಾಟಕ ಕೋವಿಡ್ ನಿಯಮದ ಅನುಸಾರವಾಗಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ನಾಳೆಯಿಂದಲೇ ಟಿಎಸ್ಆರ್ಟಿಸಿ ಬಸ್ ಸಂಚಾರ ಪುನಾರಂಭವಾಗಲಿವೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 7ರ ವರೆಗೆ ಬಸ್ಗಳು ಸಂಚರಿಸಲಿವೆ. ಈ ನಡುವೆ ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಿರುವ ಕಾರಣ ಶುಕ್ರವಾರದಿಂದ ಸೋಮವಾರ ಬೆಳಗ್ಗೆವರೆಗೆ ಯಾವುದೇ ಬಸ್ ಸಂಚಾರ ನಡೆಸುವುದಿಲ್ಲ ಎಂದು ಟಿಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.