ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ 6 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು, 59 ಸಾವು

ತೆಲಂಗಾಣದಲ್ಲಿ ನಿನ್ನೆ 70 ಸಾವಿರಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 6 ಸಾವಿರಕ್ಕೂ ಹೆಚ್ಚು ಜನರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.53 ರಷ್ಟಿದೆ.

Telangana reported 6,876 new cases
ತೆಲಂಗಾಣದಲ್ಲಿ ನಿನ್ನೆ 6 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢ

By

Published : May 4, 2021, 12:44 PM IST

ಹೈದರಾಬಾದ್ (ತೆಲಂಗಾಣ):ತೆಲಂಗಾಣದಲ್ಲಿ ನಿನ್ನೆ 6,876 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 59 ಜನ ಸೋಂಕಿಗೆ ಬಲಿಯಾಗಿದ್ದಾರೆ. 7,432 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದುವರೆಗೆ 4,63,361‬ ಪ್ರಕರಣಗಳು ವರದಿಯಾಗಿವೆ. 79,520 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಈವರೆಗೆ 2,476‬ ಜನ ಸಾವನ್ನಪ್ಪಿದ್ದಾರೆ. ಇಲ್ಲಿಯತನಕ 3,81,365 ಜನ ಕೋವಿಡ್​ನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.53 ರಷ್ಟಿದ್ದು, ರಾಷ್ಟ್ರಮಟ್ಟದಲ್ಲಿ ಶೇ 1.1 ದಾಖಲಾಗಿದೆ. ತೆಲಂಗಾಣದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 82.30 ರಷ್ಟಿದ್ದು, ದೇಶದಲ್ಲಿ ಶೇ 81.08 ಇದೆ.

ಕೊರೊನಾ ಹತ್ತಿಕ್ಕಲು ಈ ಹಿಂದೆ ಹೇರಲಾಗಿದ್ದ ನೈಟ್​ ಕರ್ಫ್ಯೂವನ್ನು ಮೇ8 ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ತೆಲಂಗಾಣ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಡ್ರೋನ್ ಬಳಕೆ ಮಾಡಲು ಯೋಜಿಸಿದ್ದು, ರಾಜ್ಯದ ಹಲವು ಭಾಗಗಳಿಗೆ ಡ್ರೋನ್ ಮೂಲಕ ಲಸಿಕೆ ರವಾನೆಯಾಗಲಿದೆ. ಈ ಮೂಲಕ ರಾಜ್ಯದಲ್ಲಿ ಸರಾಗವಾಗಿ ಲಸಿಕೆ ಹಂಚಲು ತೆಲಂಗಾಣ ಮುಂದಾಗಿದೆ.

ಇದನ್ನೂ ಓದಿ:ಹೈಕೋರ್ಟ್ ಎಚ್ಚರಿಕೆಗೆ ಮಣಿದು ರಾಜ್ಯವ್ಯಾಪಿ ಲಾಕ್​ಡೌನ್​ ವಿಧಿಸಿದ ಬಿಹಾರ ಸರ್ಕಾರ

ABOUT THE AUTHOR

...view details