ಕರ್ನಾಟಕ

karnataka

ETV Bharat / bharat

ಕೆಲ ಗಂಟೆಗಳಲ್ಲೇ ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: 2 ತಿಂಗಳ ಶಿಶು ರಕ್ಷಣೆ, ಮೂವರ ಬಂಧನ - ಹೈದರಾಬಾದ್​ನಲ್ಲಿ ಶಿಶು ಅಪಹರಣ ಪ್ರಕರಣ

ನಸುಕಿನಜಾವ 2 ತಿಂಗಳ ಶಿಶುವನ್ನು ಅಪಹರಿಸಿದ್ದ ಆರೋಪಿಗಳನ್ನು ಕೆಲ ಗಂಟೆಗಳಲ್ಲೇ ಹೆಡೆಮುರಿ ಕಟ್ಟಿರುವ ಪೊಲೀಸರು, ಶಿಶುವನ್ನು ರಕ್ಷಿಸಿದ್ದಾರೆ.

Telangana Police rescues kidnapped infant
ಅಪಹರಣ ಪ್ರಕರಣ ಭೇದಿಸಿದ ಪೊಲೀಸರು

By

Published : Nov 13, 2020, 6:46 AM IST

ಹೈದರಾಬಾದ್ (ತೆಲಂಗಾಣ):ಅಪಹರಣದ ಬಗ್ಗೆ ದೂರು ಬಂದ ಕೆಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸಿದ ತೆಲಂಗಾಣ ಪೊಲೀಸರು ಎರಡು ತಿಂಗಳ ಶಿಶುವನ್ನು ರಕ್ಷಿಸಿದ್ದು, ಮೂವರನ್ನು ಬಂಧಿಸಿದ್ದಾರೆ.

ಫಾರೂಕ್ ನಗರ ಪ್ರದೇಶದಲ್ಲಿ ಫುಟ್‌ಪಾತ್‌ನಲ್ಲಿ ವಾಸಿಸುವ ದೈನಂದಿನ ಕೂಲಿ ಕಾರ್ಮಿಕರ ಎರಡು ತಿಂಗಳ ಮಗಳನ್ನು, ಸೈಯದ್ ಸಾಹಿಲ್, ಅವರ ಪತ್ನಿ ಜಬೀನ್ ಫಾತಿಮಾ ಮತ್ತು ಅವರ ಸಹೋದರಿ ಫಾತಿಮಾ ಅಪಹರಣ ಮಾಡಿದ್ದರು ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

"ನಸುಕಿನ ಜಾವ 2ರ ಸುಮಾರಿಗೆ ಅವರು ಆಟೋರಿಕ್ಷಾದಲ್ಲಿ ಬಂದು ಶೈಕ್ ಬಶೀರ್ ಅವರ ಎರಡು ತಿಂಗಳ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಮಗುವಿನ ಪೋಷಕರು ಬೆಳಗ್ಗೆ 5ಕ್ಕೆ ಫಲಕನಾಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ".

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ "ಫಲಕ್​ನಾಮಾದ ವಟ್ಟೆಪಲ್ಲಿ ಬಳಿಯ ಸಲಾಮಿ ಆಸ್ಪತ್ರೆ ಬಳಿ ಅನುಮಾನಾಸ್ಪದವಾಗಿ ಆಟೋರಿಕ್ಷಾದಲ್ಲಿ ಪ್ರಯಾಣಿಸಿರುವುದು ಪತ್ತೆಯಾಗಿದೆ. ಹತ್ತಿರದ ಮನೆಯೊಂದನ್ನು ಪರಿಶೀಲಿಸಿದಾಗ, ಮೂವರು ಅಪಹರಣಕಾರರು, ಶಿಶುವಿನೊಂದಿಗೆ ಪತ್ತೆಯಾಗಿದ್ದಾರೆ. ಹೆಣ್ಣು ಮಗುವನ್ನು ರಕ್ಷಿಸಲಾಗಿದ್ದು, ಅಪರಾಧಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಮೂವರು ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details