ಕರ್ನಾಟಕ

karnataka

ETV Bharat / bharat

ಉದ್ಯಮಿಯೊಬ್ಬರ ಪುತ್ರನ ಬಂಧನ.. 9 ಕೋಟಿ ರೂ ನಗದು ವಶಕ್ಕೆ ಪಡೆದ ತೆಲಂಗಾಣ ಪೊಲೀಸ್​​​ - 9 ಕೋಟಿ ರೂ ನಗದು ವಶಕ್ಕೆ ಪಡೆದ ತೆಲಂಗಾಣ ಪೊಲೀಸ್​​​

ಫೋರ್ಜರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಬುಧವಾರ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ದಾಳಿ ನಡೆಸಿದ್ದಾರೆ. ಜಿಲ್ಲೆಯ ರವಿನಗರದಲ್ಲಿರುವ ದೊಡ್ಡ ಉದ್ಯಮಿಯೊಬ್ಬರ ಪುತ್ರ ಅಭಿಷೇಕ್ ಜೈನ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಅಭಿಷೇಕ್ ಮನೆಯಲ್ಲಿ ತೆಲಂಗಾಣ ಪೊಲೀಸರು 9 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ.

telangana police
ಉದ್ಯಮಿಯೊಬ್ಬರ ಪುತ್ರನ ಬಂಧನ

By

Published : Aug 24, 2022, 12:28 PM IST

ಚಂದೌಲಿ(ಉತ್ತರಪ್ರದೇಶ): ಫೋರ್ಜರಿ ಮತ್ತು ವಂಚನೆ ಪ್ರಕರಣದಲ್ಲಿ ರವಿನಗರ ಮೂಲದ ದೊಡ್ಡ ಉದ್ಯಮಿಯೊಬ್ಬರ ಪುತ್ರ ಅಭಿಷೇಕ್ ಜೈನ್​​ನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಭಿಷೇಕ್ ಜೈನ್ ಮನೆಯಲ್ಲಿ 9 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತೆಲಂಗಾಣ ಪೊಲೀಸರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ತೆಲಂಗಾಣ ಪೊಲೀಸರು ಚಂದೌಲಿಗೆ ತಲುಪಿದ್ದರು.

ಆರೋಪಿ ಅಭಿಷೇಕ್ ಜೈನ್ ಆ್ಯಪ್ ಮೂಲಕ ಜನರಿಂದ ಹಣ ಹೂಡಿಕೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆರೋಪಿ ಅಭಿಷೇಕ್ ಜೈನ್ ಆ್ಯಪ್ ಮೂಲಕ ಜನರ ಹಣವನ್ನು ದ್ವಿಗುಣಗೊಳಿಸುವಂತೆ ನಟಿಸುತ್ತಿದ್ದ. ಆರೋಪಿ ತನ್ನ ಆ್ಯಪ್ ಮೂಲಕ ತೆಲಂಗಾಣ ರಾಜ್ಯದ ಹಲವು ಜನರನ್ನು ವಂಚಿಸಿದ್ದ. ಈ ಸಂಬಂಧ ತೆಲಂಗಾಣ ಪೊಲೀಸರು ದಾಳಿ ನಡೆಸಿ ಆರೋಪಿ ಅಭಿಷೇಕ್ ಜೈನ್ ನನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಹೈದರಾಬಾದ್‌ನ ಸೈಬರ್ ಸೆಲ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಪೊಲೀಸರು ಆರೋಪಿಯನ್ನು ಮೊಘಲ್ಸರಾಯ್ (ಚಂದೌಲಿ)ಯಲ್ಲಿರುವ ಆರೋಪಿಯ ಮನೆಯಿಂದಲೇ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನು ಓದಿ:ಸುನೀಲ್ ಕುಮಾರ್ ಸೇರಿ ಆರ್‌ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ.. ಮುಂದುವರಿದ ಕಾರ್ಯಾಚರಣೆ

ABOUT THE AUTHOR

...view details