ಕರ್ನಾಟಕ

karnataka

ETV Bharat / bharat

ಪತ್ನಿ ತಲೆಗೆ ಕಲ್ಲು ಎತ್ತಿ ಹಾಕಿ, ಪ್ರಿಯತಮನ​ ಗುಪ್ತಾಂಗಕ್ಕೆ ಹಲ್ಲೆ ಮಾಡಿ ಕೊಲೆಗೈದ ಪತಿ! - ತೆಲಂಗಾಣದಲ್ಲಿ ಅಕ್ರಮ ಸಂಬಂಧ

ತೆಲಂಗಾಣದಲ್ಲಿ ವಿವಾಹೇತರ ಸಂಬಂಧ ಪ್ರಕರಣವೊಂದು ಭೀಕರ ಕೊಲೆಯಲ್ಲಿ ಅಂತ್ಯಕಂಡಿದೆ. ಬಾಯ್​ಫ್ರೆಂಡ್​ ಜೊತೆ ಏಕಾಂತದಲ್ಲಿ ಮೈಮರೆತಿದ್ದ ತನ್ನ ಪತ್ನಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ ಗಂಡ ಆಕೆಯನ್ನು ಕೊಲೆ ಮಾಡಿದ್ದಲ್ಲದೇ, ಆಕೆಯ ಬಾಯ್​ಫ್ರೆಂಡ್​ ಗುಪ್ತಾಂಗವನ್ನೇ ಛಿದ್ರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Double murder in Hyderabad, Telangana police found abdullapurmet double murder case accused, Illegal relationship, Telangana crime news, ಹೈದರಾಬಾದ್‌ನಲ್ಲಿ ಜೋಡಿ ಕೊಲೆ,  ಅಬ್ದುಲ್‌ಪುರ್‌ಮೆಟ್ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು, ತೆಲಂಗಾಣದಲ್ಲಿ ಅಕ್ರಮ ಸಂಬಂಧ, ತೆಲಂಗಾಣ ಅಪರಾಧ ಸುದ್ದಿ,
ಕೊಲೆ ಮಾಡಿದ ಪತಿ

By

Published : May 5, 2022, 9:38 AM IST

ಹೈದರಾಬಾದ್​:ಹೈದರಾಬಾದ್ ಉಪನಗರದ ಅಬ್ದುಲ್ಲಾಪುರ್ಮೆಟ್ ವಲಯದ ಕೊಟ್ಟಗುಡೆಮ್ ಬಳಿ ನಡೆದ ಜೋಡಿ ಕೊಲೆ ಪ್ರಕರಣವನ್ನು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಯಶ್ವಂತ್ ಮತ್ತು ಜ್ಯೋತಿ ವಿವಾಹೇತರ ಸಂಬಂಧದ ಕಾರಣಕ್ಕೆ ದಾರುಣವಾಗಿ ಕೊಲೆಯಾಗಿದ್ದಾರೆ. ತಾಂತ್ರಿಕ ಪುರಾವೆಗಳ ನೆರವಿನಿಂದ ಪೊಲೀಸರು ಮೃತಳ ಪತಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣದ ಸತ್ಯ ಗೊತ್ತಾಗಿದೆ.

ಘಟನೆಯ ವಿವರ:ಅಬ್ದುಲ್ಲಾಪುರ ವಲಯದ ಕೊಟ್ಟಗುಡೆಂ ಬಳಿಯ ನಿರ್ಜನ ಪ್ರದೇಶಕ್ಕೆ ಬಂದಿದ್ದ ಯುವಕ ಹಾಗೂ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಸುದ್ದಿಯಾಗಿತ್ತು. ಈ ಘಟನೆ ನಡೆದು ಮೂರು ದಿನಗಳ ನಂತರವಷ್ಟೇ ಅಂದರೆ, ಮಂಗಳವಾರ ಬೆಳಕಿಗೆ ಬಂದಿತ್ತು. ರಾಷ್ಟ್ರೀಯ ಹೆದ್ದಾರಿ ​65ರ ಪಕ್ಕದಲ್ಲಿ ಎರಡು ಶವಗಳಿವೆ ಎಂದು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅಬ್ದುಲ್ಲಾಪುರ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ತಕ್ಷಣಕ್ಕೆ ಬೆತ್ತಲೆಯಾಗಿ ಅಲ್ಲಿ ಬಿದ್ದಿದ್ದ ರಕ್ತಸಿಕ್ತ ದೇಹಗಳನ್ನು ಗುರುತಿಸಲಾಗಲಿಲ್ಲ. ಸಮೀಪದಲ್ಲೇ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸಂಖ್ಯೆ​ ಆಧರಿಸಿ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಾರೆ. ವಾಹನದ ಮಾಲೀಕ ವಾರಸಿಗೂಡಾದ ಯಡ್ಲ ಅನಿರುದ್ಧ ಅನ್ನೋದು ಪೊಲೀಸರಿಗೆ ಗೊತ್ತಾಗುತ್ತೆ. ಈ ಬಗ್ಗೆ ಅನಿರುದ್ಧ್‌ಗೆ ಮಾಹಿತಿ ನೀಡಿದ್ದು ಆತ ಸ್ಥಳಕ್ಕೆ ಬಂದು ಮೃತದೇಹ ತನ್ನ ಸಹೋದರ ಯಶವಂತ್‌ನದ್ದೇ (22) ಎಂದು ದೃಢಪಡಿಸಿದ್ದಾನೆ. ಅಲ್ಲಿಯೇ ಸಿಕ್ಕ ಕೈಚೀಲದಲ್ಲಿದ್ದ ರಸೀದಿ ಆಧರಿಸಿ ಮೃತಳನ್ನು ವಾರಸಿಗೂಡದ ಜ್ಯೋತಿ (30) ಎಂದೂ ಗುರುತಿಸಲಾಯಿತು. ಆ ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಸೆರೆ ಹಿಡಿದರು. ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟ ವಿಚಾರ ಹೀಗಿದೆ..

ಇದನ್ನೂ ಓದಿ:ಎಚ್ಚರಿಕೆ ನೀಡಿದರೂ ತಾಯಿಯೊಂದಿಗೆ ವಿವಾಹೇತರ ಸಂಬಂಧ.. ವ್ಯಕ್ತಿ ಗುಪ್ತಾಂಗವನ್ನೇ ಕತ್ತರಿಸಿದ ಮಗಳು!

ವಿವಾಹೇತರ ಸಂಬಂಧಕ್ಕೆ ಭೀಕರ ಕೊಲೆ: ವಾರಸಿಗೂಡಾದಲ್ಲಿ ಜ್ಯೋತಿ ಕುಟುಂಬ ವಾಸವಾಗಿತ್ತು. ಈಕೆಯ ಪತಿ ಸ್ಟೀಲ್​ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಇದೇ ಪ್ರದೇಶದಲ್ಲಿ ಯಡ್ಲ ಯಶವಂತ್​ ಎಂಬ ಯುವಕನ ಕುಟುಂಬವೂ ನೆಲೆಸಿದೆ. ಯಶವಂತ್ ಕ್ಯಾಬ್ ಚಾಲಕ. ಈತನ ತಂದೆ ತೆಂಗಿನಕಾಯಿ ಮಾರಾಟಗಾರ. ಯಶವಂತ್ ಆರಂಭದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕಾರು ಖರೀದಿಸಿ ಕ್ಯಾಬ್​ ನಡೆಸುತ್ತಿದ್ದ. ಈ ನಡುವೆ ಯಶವಂತ್​ ಮತ್ತು ಜ್ಯೋತಿಗೆ ಪರಿಚಯವಾಗಿದೆ. ಈ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿದೆ.

30 ಕಿಮೀ ಫಾಲೋ ಮಾಡಿದ ಪತಿ:ಯಶವಂತ್ ಮತ್ತು ಜ್ಯೋತಿ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಕುರಿತಾಗಿ ಪತಿ ಹಿಂದೊಮ್ಮೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದನಂತೆ. ಆದರೂ ನಡವಳಿಕೆ ಬದಲಾಗಲಿಲ್ಲ. ಯಶವಂತ್ ಮತ್ತು ಜ್ಯೋತಿ ಭಾನುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ವಾರಸಿಗುಡದಿಂದ ತೆರಳುತ್ತಿರುವುದನ್ನು ಪತಿ ಗಮನಿಸಿ ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲ, ದಾರಿ ನಡುವೆ ಮದ್ಯ ಖರೀದಿಸಿ, ದಾರಿಯುದ್ದಕ್ಕೂ ಕುಡಿಯುತ್ತಲೇ ಹಿಂಬಾಲಿಸಿದ್ದಾನೆ. ಹೀಗೆ ಸಾಗಿದಾಗ ಸುಮಾರು 30 ಕಿ.ಮೀ ದೂರದಲ್ಲಿರುವ ಅಬ್ದುಲ್ಲಾಪುರ್ಮೀಟ್ ವಲಯದ ಕೊಟ್ಟಗುಡ ಬಳಿಯ ನಿರ್ಜನ ಪ್ರದೇಶದ ಪೊದೆಯೊಳಗೆ ತನ್ನ ಪತ್ನಿ ಮತ್ತು ಪ್ರಿಯಕರ ಹೋಗುವುದನ್ನು ಕಂಡಿದ್ದಾನೆ.

ಏಕಾಂತದಲ್ಲಿ ಜೋಡಿ:ಪೊದೆಯೊಳಗೆ ಹೋದ ಯಶ್ವಂತ್​ ಮತ್ತು ಜ್ಯೋತಿ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದರು. ಇದನ್ನು ಪತಿ ಪ್ರತ್ಯಕ್ಷವಾಗಿ ನೋಡಿದ್ದನಂತೆ. ಕೋಪ ತಡೆಯಲಾರದೆ ಪಕ್ಕದಲ್ಲಿದ್ದ ಕಲ್ಲನ್ನೆತ್ತಿ ಎತ್ತಿ ಜ್ಯೋತಿ ತಲೆಗೆ ಹಾಕಿಯೇ ಬಿಟ್ಟ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರು. ಇಷ್ಟಕ್ಕೆ ಸುಮ್ಮನಾಗದ ಆತ ತಾನು ತಂದಿದ್ದ ಸ್ಕ್ರೂಡ್ರೈವರ್​ನಿಂದ ಯಶವಂತ್ ಹೃದಯಕ್ಕೆ ಚುಚ್ಚಿದ್ದಾನೆ. ಆತನೂ ಕುಸಿದು ಬಿದ್ದ. ಇಷ್ಟಕ್ಕೆ ನಿಲ್ಲಿಸಲಿಲ್ಲ. ಕೋಪದಿಂದ ಗುಪ್ತಾಂಗವನ್ನೂ ಛಿದ್ರಗೊಳಿಸಿದ. ಹೀಗಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಾತ್ರಿ ಮಾಡಿಕೊಂಡ ಮೇಲಷ್ಟೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.!

ಇದನ್ನೂ ಓದಿ:ಅಕೌಂಟೆಂಟ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​: ವಿವಾಹೇತರ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಿದ ಪತ್ನಿ!

ABOUT THE AUTHOR

...view details