ಹೈದರಾಬಾದ್: ಮೌಂಟ್ ಎವರೆಸ್ಟ್‌ನಲ್ಲಿ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಹಾರಿಸುವುದಕ್ಕೂ ಮೊದಲು ಅತ್ಯಂತ ಕಠಿಣ ಶಿಖರವನ್ನು ಏರುವಲ್ಲಿ ಅನ್ವಿತಾ ರೆಡ್ಡಿ ತಮ್ಮದೇ ಸಾಧನೆ ಮಾಡಿದ್ದಾರೆ. ರಷ್ಯಾದಲ್ಲಿನ ಮೌಂಟ್ ಎಲ್ಬ್ರಸ್ ಸಮುದ್ರ ಮಟ್ಟದಿಂದ ಸುಮಾರು 18,000 ಅಡಿ ಎತ್ತರದಲ್ಲಿದೆ. ಗಾಳಿಯನ್ನು ಹೆಪ್ಪುಗಟ್ಟುವಂತೆ ಮಾಡುವ ಕಠಿಣ ಚಳಿ ಇಲ್ಲಿದೆ.
ಈಗಾಗಲೇ ಐವರು ಪರ್ವತಾರೋಹಿಗಳು ಶಿಖರಕ್ಕೆ ಹೋಗುವಾಗ ಸಾವಿಗೀಡಾಗಿದ್ದಾರೆ. ಆದರೂ ಅನ್ವಿತಾ ಅವರು ಧೈರ್ಯದಿಂದ ಅಲ್ಲಿಗೆ 2021 ಡಿಸೆಂಬರ್ನಲ್ಲಿ ಹೆಜ್ಜೆ ಇಟ್ಟಿದ್ದರು. -50 ಡಿಗ್ರಿ ತಾಪಮಾನ ಸಹಿಸಿಕೊಂಡು ಎಲ್ಬ್ರಸ್ ಪರ್ವತವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇಲ್ಲಿ ಅಪಘಾತಕ್ಕೂ ಒಳಗಾಗಿದ್ದ ಅನ್ವಿತಾ:ಈ ಶಿಖರದಲ್ಲಿ ಭಾರತದ ಧ್ವಜ ಹಾರಿಸಲು ಮುಂದಾದಾಗ ಸಣ್ಣ ಅಪಘಾತಕ್ಕೂ ಒಳಗಾಗಿದ್ದರು. ವೇಗವಾಗಿ ಬೀಸುತ್ತಿದ್ದ ತಣ್ಣನೆಯ ಗಾಳಿಗೆ ಅವರ ಮುಖವನ್ನು ಮುಚ್ಚಿದ ವಸ್ತ್ರ ಹಾರಿಹೋಗಿತ್ತು. ಅದರೊಂದಿಗೆ ಬಾಯಿಗೆ ಬಲವಾದ ಪೆಟ್ಟು ಬಿದ್ದಿತ್ತು. ಎರಡು ತಿಂಗಳ ಸುದೀರ್ಘ ಚಿಕಿತ್ಸೆಯ ನಂತರ ಅನ್ವಿತಾ ಚೇತರಿಸಿಕೊಂಡಿದ್ದರು.
ಅನ್ವಿತಾ ಹುಟ್ಟೂರು ಯಾದಾದ್ರಿ ಜಿಲ್ಲೆಯ ಭೋಂಗಿರ್. ತಾಯಿ ಚಂದ್ರಕಲಾ ಅಂಗನವಾಡಿ ಶಿಕ್ಷಕಿ. ಆಕೆಯ ತಂದೆ ರೈತ. ಬಾಲ್ಯದಲ್ಲಿ ಅವರು ಭೋಂಗಿರ್ ಕೋಟೆಯ ಪಕ್ಕದ ಶಾಲೆಗೆ ಹೋಗುತ್ತಿದ್ದರು, ಅಲ್ಲಿ ಜನರು ಕೋಟೆಯನ್ನು ಹತ್ತುವುದನ್ನು ನೋಡುತ್ತಿದ್ದರಂತೆ. ಇಂಟರ್ ಮೀಡಿಯೇಟ್ ಓದುತ್ತಿದ್ದಾಗ ದಿನಪತ್ರಿಕೆಯಲ್ಲಿ ರಾಕ್ ಕ್ಲೈಂಬಿಂಗ್ ತರಬೇತಿ ಕುರಿತು ಜಾಹೀರಾತು ನೋಡಿ ಪೋಷಕರ ಮನವೊಲಿಸಿ ಐದು ದಿನಗಳ ಕೋರ್ಸ್‌ಗೆ ಸೇರಿಕೊಂಡಿದ್ದರಂತೆ.
ಮೌಂಟ್ ಎವರೆಸ್ಟ್ ಶಿಖರ ಏರುವ ಅನ್ವಿತಾ ಕನಸು ಈಡೇರಿದ್ದು ಹೇಗೆ?.. ಇಲ್ಲಿದೆ ರೆಡ್ಡಿ ಸಾಧನೆಯ ಶಿಖರ ಇವರ ಉತ್ಸಾಹ ಮತ್ತು ತ್ವರಿತ ಚಿಂತನೆಯನ್ನು ನೋಡಿದ ತರಬೇತುದಾರ ಆಕೆಯ ಪೋಷಕರಿಗೆ ಮುಂದುವರಿದ ತರಬೇತಿ ಕೋರ್ಸ್‌ಗೆ ಹೋಗಲು ಸಲಹೆ ನೀಡಿದ್ದರು. ಐದು ದಿನಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅನ್ವಿತಾ ಸಿಕ್ಕಿಂನ ಬಿ.ಸಿ.ರಾಯ್ ಮೌಂಟೇನ್‌ನಲ್ಲಿ ನಲವತ್ತು ದಿನಗಳ ತರಬೇತಿ ಶಿಬಿರವನ್ನು ಪಡೆದಿದ್ದರು. ಭೋಂಗಿರ್‌ನ ನವಭಾರತ್ ಪದವಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಜಾ ದಿನಗಳಲ್ಲಿ ರಾಕ್ ಕ್ಲೈಂಬಿಂಗ್ ಅಭ್ಯಾಸ ಮಾಡುತ್ತಿದ್ದರು.
ಎವರೆಸ್ಟ್ ಏರುವುದು ಕಸಾಗಿತ್ತು:ಎವರೆಸ್ಟ್ ಏರುವುದು ಇವರ ಕನಸಾಗಿತ್ತಂತೆ. ಇದಕ್ಕಾಗಿ ಅವರು ಹಿಮಾಲಯದಲ್ಲಿ ಒಂದು ತಿಂಗಳ ಅವಧಿಯ ಮೂಲ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರು. ಆದರೆ, ಜಾಕೆಟ್, ಬೂಟು, ಗೇರುಗಳಿಗೆ ಲಕ್ಷಗಟ್ಟಲೆ ಬೆಲೆ ಇತ್ತು. ಅದಕ್ಕಾಗಿ ಪ್ರಾಯೋಜಕರನ್ನು ಹುಡುಕುವಲ್ಲಿ ಆಕೆಗೆ ತೊಂದರೆಯಾಗಿತ್ತು. ತದನಂತರ ಕೋವಿಡ್ -19 ಸಂಭವಿಸಿತು. ಕೊನೆಗೆ ಮೇ 12ರಂದು ಎವರೆಸ್ಟ್‌ಗೆ ಪ್ರಯಾಣ ಆರಂಭಿಸಿ 16ರಂದು ಯಶಸ್ವಿಯಾಗಿ ಶಿಖರವನ್ನು ತಲುಪಿದ್ದರು.
ಈ ಎಲ್ಲ ಸಾಧನೆಗೆ ಮಲವತ್ ಪೂರ್ಣ ಮತ್ತು ಆನಂದ್ ಕುಮಾರ್ ನನಗೆ ಸ್ಫೂರ್ತಿ ಎಂದು ಅನ್ವಿತಾ ಹೇಳುತ್ತಾರೆ. ಪ್ರಸ್ತುತ ಅನ್ವಿತಾ ಭೋಂಗಿರ್ ಕೋಟೆಯಲ್ಲಿ ಬೋಧಕರಾಗಿದ್ದಾರೆ. ರಾಕ್ ಕ್ಲೈಂಬಿಂಗ್ಗಾಗಿ ಗುರುಕುಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಅವರು ಎವರೆಸ್ಟ್ ಜೊತೆಗೆ ರೆನೋಕ್, BC ರಾಯ್, ಕಿಲಿಮಂಜಾರೊ ಮತ್ತು ಎಲ್ಬ್ರಸ್ ಶಿಖರಗಳನ್ನು ಏರಿದ್ದಾರೆ.
ಇದನ್ನೂ ಓದಿ: ಸರಸರನೇ ಕಂಬ ಹತ್ತುವ ಯುವತಿ.. ಜೂನಿಯರ್ ಲೈನ್ಮೆನ್ ಹುದ್ದೆ ಗಿಟ್ಟಿಸಿಕೊಂಡ ತೆಲಂಗಾಣದ ಸಿರಿಶಾ