ಕರ್ನಾಟಕ

karnataka

ETV Bharat / bharat

ಹೈದರಾಬಾದ್​​ ಕಂಟೋನ್ಮೆಂಟ್​ನ ಮಿಲ್ಟ್ರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ : ತೆಲಂಗಾಣ ಸಚಿವ ಕೆಟಿಆರ್ - ಹೈದರಾಬಾದ್ ಕಂಟೋನ್ಮೆಂಟ್ ಅಧಿಕಾರಿಗಳಿಗೆ ಎಚ್ಚರಿಕೆ

ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ..

Telangana Minister KTR warns to cut water, power supply to military authorities in Hyderabad
ಹೈದರಾಬಾದ್​​ ಕಂಟೋನ್ಮೆಂಟ್​ನ ಮಿಲಿಟರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ: ತೆಲಂಗಾಣ ಸಚಿವ ಕೆಟಿಆರ್

By

Published : Mar 13, 2022, 11:41 AM IST

ಹೈದರಾಬಾದ್, ತೆಲಂಗಾಣ :ಹೈದರಾಬಾದ್​ ಕಂಟೋನ್ಮೆಂಟ್​ನಲ್ಲಿರುವ ಮಿಲಿಟರಿ ಅಧಿಕಾರಿಗಳು ತಮಗೆ ಬಯಸಿದಾಗ ರಸ್ತೆಗಳನ್ನು ಮುಚ್ಚುವುದು ನ್ಯಾಯಸಮ್ಮತವಲ್ಲ ಎಂದಿರುವ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಮತ್ತು ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ರಾವ್, ಕಂಟೋನ್ಮೆಂಟ್​ಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆಟಿಆರ್, ತಾವು ಬಯಸಿದಾಗ ರಸ್ತೆಯನ್ನು ಮುಚ್ಚುವ ಕಂಟೋನ್ಮೆಂಟ್ ಅಧಿಕಾರಿಗಳ ಕ್ರಮದಿಂದ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಮುಂದುವರೆದರೆ, ನಾವು ಕಂಟೋನ್ಮೆಂಟ್​ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದಿದ್ದಾರೆ.

ಹೈದರಾಬಾದ್​ನ ನಾಲಾ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಕೆಟಿಆರ್ ಹೇಳಿದ್ದಾರೆ.

ಇದನ್ನೂ ಓದಿ:ಕೆಮಿಕಲ್​​ ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕಲ್ಲು ತೂರಾಟ : 10 ಮಂದಿಗೆ ಗಾಯ

2021ರಲ್ಲೇ ಕೆಟಿಆರ್ ಕಂಟೋನ್ಮೆಂಟ್ ಅಧಿಕಾರಿಗಳು ರಸ್ತೆಯನ್ನು ಮುಚ್ಚುವುದನ್ನು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಎಂದಿದ್ದರು. ಈ ವೇಳೆ ಪ್ರತಿಪಕ್ಷವಾದ ಬಿಜೆಪಿ ಕೆಟಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಜೊತೆಗೆ ಕೆಟಿಆರ್​ ಮಿಲ್ಟ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದರಾಬಾದ್‌ನಿಂದ ಭಾರತೀಯ ಸೇನೆಯ ನೆಲೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತ್ತು.

ABOUT THE AUTHOR

...view details