ಹೈದರಾಬಾದ್(ತೆಲಂಗಾಣ):ತೆಲಂಗಾಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರತೀಯ ಜನತಾ ಪಾರ್ಟಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅದಕ್ಕಾಗಿ ಪಕ್ಷದ ಪ್ರಮುಖ ಮುಖಂಡರು ಈಗಾಗಲೇ ಮುತ್ತಿನ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ವಿಷಯನ್ನಿಟ್ಟುಕೊಂಡು ತೆಲಂಗಾಣ ಸಚಿವ ಕೆ.ಟಿ. ರಾಮ್ರಾವ್ ಬಿಜೆಪಿಯ ಕಾಲೆಳೆದಿದ್ದಾರೆ.
ಕೆಟಿಆರ್ ಟ್ವೀಟ್ ಇಂತಿದೆ: ಸುಂದರ ನಗರ ಹೈದರಾಬಾದ್ಗೆ ಕಾರ್ಯಕಾರಿಣಿ ಸಭೆಗಾಗಿ ಆಗಮಿಸುತ್ತಿರುವ ವಾಟ್ಸಾಪ್ ವಿಶ್ವವಿದ್ಯಾಲಯಕ್ಕೆ ಸ್ವಾಗತ. ಎಲ್ಲ ಜುಮ್ಲಾ ಜೀವಿಗಳಲ್ಲಿ ನನ್ನದೊಂದು ವಿನಂತಿ. ಇಲ್ಲಿನ ದಮ್ ಬಿರಿಯಾನಿ ಮತ್ತು ಇರಾನಿ ಟೀ ರುಚಿ ಸವಿಯೋದನ್ನು ಮರೆಯದಿರಿ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಕೆಲವೊಂದು ಫೋಟೋ ಹಂಚಿಕೊಂಡಿರುವ ಅವರು, ಅಲ್ಲಿಗೂ ಭೇಟಿ ನೀಡಿ ಎಂದಿದ್ದಾರೆ. ಪ್ರಮುಖವಾಗಿ ಕಾಳೇಶ್ವರಮ್ ಯೋಜನೆ, ಪೊಲೀಸ್ ಕಮಾಂಡ್ ಕಂಟ್ರೋಲ್ ಕಟ್ಟಡ ಸೇರಿದಂತೆ ಅನೇಕ ಸುಂದರ ಕಟ್ಟಡಗಳ ಫೋಟೋ ಶೇರ್ ಮಾಡಿ, ಈ ಮೂಲಕ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ ಕಾಲೆಳೆದಿದ್ದಾರೆ.