ಕರ್ನಾಟಕ

karnataka

ETV Bharat / bharat

ಮಧ್ಯರಾತ್ರಿವರೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಮಗಳ ಕತ್ತು ಹಿಸುಕಿದ ಮಲತಂದೆ - ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಮಲತಂದೆ

ತೆಲಂಗಾಣದ ಹೈದರಾಬಾದ್​ನಲ್ಲಿ ದುರಂತ ಘಟನೆಯೊಂದು ನಡೆದಿದೆ. ಮಧ್ಯರಾತ್ರಿವರೆಗೆ ಫೋನ್​ನಲ್ಲಿ ಮಾತನಾಡುತ್ತಿದ್ದ ಮಗಳನ್ನು ಮಲತಂದೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

man strangles stepdaughter to death  Telangana man strangles stepdaughter to death  girl was killed by her stepfather  continuous conversation over phone  ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಮಗಳ  ಮಗಳನ್ನು ಕೊಲೆ ಮಾಡಿದ ಮಲತಂದೆ  ಹೈದರಾಬಾದ್​ನಲ್ಲಿ ದುರಂತ ಘಟನೆ  ಹೆಚ್ಚು ಮಾತನಾಡುತ್ತಿದ್ದ ಮಗಳನ್ನು ಮಲತಂದೆ ಕೊಲೆ  ಮುಶಿರಾಬಾದ್ ಪೊಲೀಸ್ ಠಾಣೆ  ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಮಲತಂದೆ
ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಮಗಳನ್ನು ಕೊಲೆ ಮಾಡಿದ ಮಲತಂದೆ

By

Published : Dec 19, 2022, 9:50 AM IST

ಹೈದರಾಬಾದ್​, ತೆಲಂಗಾಣ:ಇದು ಡಿಜಿಟಲ್​ ಯುಗ.. ಈಗ ಎಲ್ಲ ಕಾರ್ಯವೂ ಫೋನ್​ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ಅಷ್ಟೇ ಅಲ್ಲ ಅದೆಷ್ಟೋ ಯುವಕ ಮತ್ತು ಯುವತಿಯರು ಟ್ವಿಟ್ಟರ್​, ಫೇಸ್​ಬುಕ್, ಚಾಟಿಂಗ್, ಕಾಲಿಂಗ್​​ ಅಂತಾ ಫೋನ್​ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಯುವತಿಯೊಬ್ಬಳು ತನ್ನ ತಂದೆಯಿಂದಲೇ ಕೊಲೆ ಆಗಿರುವ ಘಟನೆ ಮುನ್ನೆಲೆಗೆ ಬಂದಿದೆ.

ಸ್ನೇಹಿತನೊಂದಿಗೆ ಮಧ್ಯರಾತ್ರಿಯವರೆಗೂ ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಮಲತಂದೆಯೊಬ್ಬ ಸಿಟ್ಟಿಗೆದ್ದು ಮಗಳನ್ನು ಕೊಲೆ ಮಾಡಿದ್ದಾನೆ. ಹೈದರಾಬಾದ್‌ನ ಮುಶಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ಸ್‌ಪೆಕ್ಟರ್ ಜಹಾಂಗೀರ್ ಯಾದವ್ ಪ್ರಕಾರ, ಮಧ್ಯರಾತ್ರಿಯವರೆಗೆ ಫೋನ್‌ನಲ್ಲಿ ಮಾತನಾಡಬೇಡ ಎಂದು ತಂದೆ ಸಾದಿಕ್​ ತನ್ನ 17 ವರ್ಷದ ಮಗಳಿಗೆ ಅನೇಕ ಬಾರಿ ಹೇಳಿದ್ದಾನೆ. ಆದ್ರೂ ಸಹಿತ ಬಾಲಕಿ ತನ್ನ ಹಠ ಬಿಡದೇ ಮತ್ತೆ ಸ್ನೇಹಿತನೊಂದಿಗೆ ತನ್ನ ಮಾತು ಮುಂದುರಿಸಿದ್ದಾಳೆ.

ಮಗಳ ವರ್ತನೆ ಕಂಡ ಸಾದಿಕ್​ಗೆ ವಿಪರೀತ ಕೋಪ ಬಂದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮುಶಿರಾಬಾದ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದಿ :ಮೈಸೂರಲ್ಲಿ ಪೊಲೀಸ್​ ಅಧಿಕಾರಿಯ ಮಗಳು ಆತ್ಮಹತ್ಯೆ

ABOUT THE AUTHOR

...view details