ಕರ್ನಾಟಕ

karnataka

ETV Bharat / bharat

9.2 ಡಿಗ್ರಿ ಸೆಂಟಿಗ್ರೇಡ್​ ನೀರಿನಲ್ಲಿ ಕುಳಿತು ವ್ಯಕ್ತಿ ಸಾಹಸ.. ಪತ್ನಿಯೂ ಸಾಹಸಿಯೇ..

ರವೀಂದರ್ ಅವರ ಪತ್ನಿ ಲಕ್ಷ್ಮಿ ಅವರು 2018ರಲ್ಲಿ 9 ತಿಂಗಳ ಗರ್ಭಿಣಿಯಾಗಿದ್ದಾಗ ಕ್ರೀಡಾಂಗಣದಲ್ಲಿ 5 ಕಿ.ಮೀ ದೂರವನ್ನು 30 ನಿಮಿಷ 22 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು. ಈಗ ಲಕ್ಷ್ಮೀ ಪತಿ ರವೀಂದರ್ ಮತ್ತೊಂದು ಸಾಹಸ ಮಾಡಿದ್ದಾರೆ.

Telangana man creates a new record he sits half an hour in cold water
9.2 ಡಿಗ್ರಿ ಸೆಂಟಿಗ್ರೇಡ್​ ನೀರಿನಲ್ಲಿ ಕುಳಿತು ವ್ಯಕ್ತಿ ಸಾಹಸ..: ಇಲ್ಲಿದೆ ಸಾಹಸಿಗಳ ಕುಟುಂಬ

By

Published : Feb 3, 2022, 1:51 PM IST

Updated : Feb 3, 2022, 2:25 PM IST

ಕರೀಂನಗರ(ತೆಲಂಗಾಣ):ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ತಾಪಮಾನ ಕುಸಿದ್ರೆ, ಚಳಿಗೆ ಶಪಿಸುವ ನಾವು, ತಣ್ಣಗಿನ ನೀರನ್ನು ಮುಟ್ಟುವುದಕ್ಕೆ ಕಷ್ಟ ಪಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 9 ಡಿಗ್ರಿ ಸೆಂಟಿಗ್ರೇಡ್​​ ತಾಪಮಾನವಿರುವ (ಐಸ್​ ನೀರು) ನೀರಿನಲ್ಲಿ ಅರ್ಧಗಂಟೆ ಕುಳಿತು ಸಾಹಸ ಮೆರೆದಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಚಳಿಗಾಲದ ಚಳಿ ಸರಾಸರಿ 18 ರಿಂದ 20 ಡಿಗ್ರಿ ಸೆಂಟಿಗ್ರೇಡ್​​ನಷ್ಟಿರುತ್ತದೆ. ಅದನ್ನು ತಡೆದುಕೊಳ್ಳುವುದಕ್ಕೆ ನಮಗೆ ಕಷ್ಟವಾಗಿರುತ್ತದೆ. ಆದರೆ ತೆಲಂಗಾಣದ ಕರೀಂನಗರ ಜಿಲ್ಲೆಗೆ ಸೇರಿದ ವ್ಯಕ್ತಿಯೋರ್ವ 9.2 ಡಿಗ್ರಿ ಸೆಂಟ್ರಿಗ್ರೇಡ್ ತಾಪಮಾನವಿರುವ ನೀರಿನಲ್ಲಿ ಅರ್ಧಗಂಟೆ ಕುಳಿತು, ಲಿಮ್ಕಾ ಬುಕ್ ಆಫ್ ರೆಕಾರ್ಡ್​​ನಲ್ಲಿ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಇವರ ಹೆಸರು ಕಾಮಾರಪು ರವೀಂದರ್.

ಕಾಮಾರಪು ರವೀಂದರ್ ಸಾಹಸ

ಕರೀಂನಗರದಲ್ಲಿರುವ ತೀಗಲಗುಟ್ಟಪಲ್ಲಿಯ ತಮ್ಮ ನಿವಾಸ ಬಳಿ ಡ್ರಮ್​ನಲ್ಲಿ ಐಸ್ ತುಂಬಿ, ಅದರಲ್ಲಿ ಕುಳಿತು ಸಾಹಸ ಪ್ರದರ್ಶಿಸಿದ ರವೀಂದರ್, ಈ ಸಾಹಸವನ್ನು ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗೆ ಕಳಿಸುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿ ಬೆಳವಣಿಗೆ ನೋಡಿ ಕೆಸಿಆರ್​ ಭೀತಿಗೊಳಗಾಗಿದ್ದಾರೆ: ಡಿಕೆ ಅರುಣಾ ವಾಗ್ದಾಳಿ!

ಗರ್ಭಿಣಿಯಾಗಿದ್ದಾಗ ರವೀಂದರ್ ಪತ್ನಿ ದಾಖಲೆ:ರವೀಂದರ್ ಅವರ ಪತ್ನಿ ಲಕ್ಷ್ಮಿ ಅವರು 2018ರಲ್ಲಿ 9 ತಿಂಗಳ ಗರ್ಭಿಣಿಯಾಗಿದ್ದಾಗ ಸಾಹಸವೊಂದನ್ನು ಮಾಡಿದ್ದರು. ಕರೀಂನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 5 ಕಿ.ಮೀ ದೂರವನ್ನು 30 ನಿಮಿಷ 22 ಸೆಕೆಂಡುಗಳಲ್ಲಿ ಕ್ರಮಿಸಿ ಲಕ್ಷ್ಮಿ ದಾಖಲೆ ನಿರ್ಮಿಸಿದ್ದರು. ನಂತರ ಸಾಮಾನ್ಯ ಹೆರಿಗೆಯ ಮೂಲಕವೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ಗರ್ಭಿಣಿಯರಿಗೆ ವ್ಯಾಯಾಮದ ಅಗತ್ಯತೆ ಒತ್ತಿ ಹೇಳಿದ್ದರು.

ಓಟದಲ್ಲಿ ದಾಖಲೆ ನಿರ್ಮಿಸಿದ್ದ ರವೀಂದರ್​​:ಈ ಮೊದಲು ಬಿರುಬೇಸಿಗೆಯಲ್ಲಿ ಒಂದು ಗಂಟೆ ಅವಧಿಯಲ್ಲಿ 10 ಕಿ.ಮೀ. ಓಟವನ್ನು ಯಶಸ್ವಿಯಾಗಿ ಪೂರೈಸಿ ರವೀಂದರ್​ ದಾಖಲೆ ನಿರ್ಮಿಸಿದ್ದರು. 56 ವರ್ಷ ವಯಸ್ಸಿನ ರವೀಂದರ್ ಆರೋಗ್ಯವಾಗಿದ್ದಾರೆ.

ಈಗ ಐಸ್​ ನೀರಿನಲ್ಲಿ ಕುಳಿತುಕೊಳ್ಳುವ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​ನಲ್ಲಿ ಸ್ಥಾನಗಳಿಸಲು ಪ್ರಯತ್ನಿಸಿದ್ದಾರೆ.

Last Updated : Feb 3, 2022, 2:25 PM IST

ABOUT THE AUTHOR

...view details