ದುಬೈ:ಅದೃಷ್ಟ ಒಲಿದರೆ ರಾತ್ರೋರಾತ್ರಿ ಮನುಷ್ಯ ಸಿರಿವಂತನಾಗಬಹುದು ಎಂಬುದಕ್ಕೆ ದುಬೈನ ಕಂಪನಿಯಲ್ಲಿ ಚಾಲಕನಾಗಿರುವ ತೆಲಂಗಾಣದ ಈ ವ್ಯಕ್ತಿಯೇ ಸಾಕ್ಷಿ. ಎಮಿರೇಟ್ಸ್ ಲಕ್ಕಿ ಡ್ರಾದಲ್ಲಿ 15 ಮಿಲಿಯನ್ ದಿರ್ಹಂ ಅಂದರೆ 30 ಕೋಟಿ ರೂಪಾಯಿ ಬಹುಮಾನ ಗಿಟ್ಟಿಸಿಕೊಂಡು ದಿಢೀರ್ ಕೋಟ್ಯಧಿಪತಿಯಾಗಿದ್ದಾನೆ.
ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ತೆಲಂಗಾಂಣದ ಜಗ್ತಿಯಾಲ್ ಜಿಲ್ಲೆಯ ತುಂಗೂರಿನವರಾದ ಅಜಯ್, 30 ದಿರ್ಹಂ ನೀಡಿ 2 ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದರಲ್ಲಿ ಒಂದಕ್ಕೆ 30 ಕೋಟಿ ರೂಪಾಯಿ ಲಾಟರಿ ಬಂದಿದೆ. ಇದನ್ನು ತಿಳಿದ ಆತನಿಗೆ ಇನ್ನಿಲ್ಲದ ಸಂತೋಷವಾಗಿದೆ. ಸಂಬಳವಾಗಿ ಆತ ಮಾಸಿಕವಾಗಿ 3,200 ದಿರ್ಹಂ ಪಡೆಯುತ್ತಿದ್ದಾನೆ.