ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಒಂದೇ ದಿನ 6,551 ಕೋವಿಡ್​ ಕೇಸ್​: ಹಾಟ್​ಸ್ಪಾಟ್​ ಆದ ಹೈದರಾಬಾದ್​ - ಸಿಎಂ ಕೆ ಚಂದ್ರಶೇಖರ್​ ರಾವ್​​

ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ 6,551 ಹೊಸ ಕೇಸ್​ಗಳು ವರದಿಯಾಗಿದ್ದು, 45 ಮಂದಿ ಮೃತಪಟ್ಟಿದ್ದಾರೆ.

Telangana logs 6,551 new COVID-19 cases, 43 deaths push toll past 2k mark
ತೆಲಂಗಾಣದಲ್ಲಿ ಒಂದೇ ದಿನ ದಾಖಲಾಯ್ತು 6,551 ಕೋವಿಡ್​ ಕೇಸ್

By

Published : Apr 26, 2021, 2:19 PM IST

ಹೈದರಾಬಾದ್​: ನೈಟ್​ ಕರ್ಫ್ಯೂ ಮಾತ್ರ ಜಾರಿಯಲ್ಲಿರುವ ತೆಲಂಗಾಣದಲ್ಲಿ ದಿನೇ ದಿನೇ ಕೋವಿಡ್​ ಸೋಂಕಿತರ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 6,551 ಹೊಸ ಕೇಸ್​ಗಳು ವರದಿಯಾಗಿದ್ದು, 45 ಮಂದಿ ಕೊನೆಯುಸಿರೆಳೆದಿದ್ದಾರೆ.

ರಾಜ್ಯದಲ್ಲೀಗ ಕೊರೊನಾ ಪ್ರಕರಣಗಳ ಸಂಖ್ಯೆ 4,01,783ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಒಟ್ಟು 3,34,144 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದೆ. ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್‌ಎಂಸಿ) ವ್ಯಾಪ್ತಿಯಲ್ಲೇ ಭಾನುವಾರ ಒಂದೇ ದಿನ 1418 ಪ್ರಕರಣಗಳು ಪತ್ತೆಯಾಗಿದ್ದು, ರಾಜಧಾನಿ ಹೈದರಾಬಾದ್​ ಕೋವಿಡ್​ ಹಾಟ್​ಸ್ಪಾಟ್ ಆಗುತ್ತಿದೆ.

ಇದನ್ನೂ ಓದಿ: ತೆಲಂಗಾಣದಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ವ್ಯಾಕ್ಸಿನ್​.. ಕರ್ನಾಟಕದಲ್ಲಿ!?

ಸೋಂಕು ಹೆಚ್ಚುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದಿದ್ದಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದ್ದ ಹಿನ್ನೆಲೆ ಏ.20ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ವಿಧಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಈವರೆಗೆ 35.71 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್​ ಲಸಿಕೆ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ 'ಉಚಿತ ಲಸಿಕೆ' ನೀಡುವುದಾಗಿ ಸಿಎಂ ಕೆ ಚಂದ್ರಶೇಖರ್​ ರಾವ್​​ ಘೋಷಿಸಿದ್ದಾರೆ.

ABOUT THE AUTHOR

...view details