ಕರ್ನಾಟಕ

karnataka

ಇಂದಿನಿಂದ ತೆಲಂಗಾಣ 'ಲಾಕ್​': ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನರು

By

Published : May 12, 2021, 1:01 PM IST

ತೆಲಂಗಾಣದಲ್ಲಿ ಇಂದಿನಿಂದ 10 ದಿನಗಳ ಲಾಕ್​ಡೌನ್​ ಜಾರಿಯಾಗಿದೆ. ಆದರೆ ಕೆಲವೆಡೆ ಜನರು ಎಂದಿನಿಂತೆ ವ್ಯಾಪಾರ ವಹಿವಾಟು ಮುಂದುವರೆಸಿದ್ದಾರೆ.

Telangana Lockdown
ತೆಲಂಗಾಣ ಲಾಕ್​ಡೌನ್​

ತೆಲಂಗಾಣ:ರಾಜ್ಯದಲ್ಲಿದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದಿನಿಂದ ಲಾಕ್​ಡೌನ್​ ಜಾರಿಯಲ್ಲಿದೆ.

ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿದ್ದು, ಬಳಿಕ ಲಾಕ್​ಡೌನ್ ​​ ವಿಧಿಸಲಾಗಿದೆ. ಅಂತರ್‌ರಾಜ್ಯ ಬಸ್​ ಸಂಚಾರ, ಖಾಸಗಿ, ಸರ್ಕಾರಿ ಬಸ್​ ಪ್ರಯಾಣವನ್ನು ನಿಷೇಧಿಸಿ ಪ್ರತಿ ದಿನ 20 ಗಂಟೆಗಳ ನಿರ್ಬಂಧ ಘೋಷಿಸಲಾಗಿದೆ.

ಆದರೆ ರಂಜಾನ್​ ಹಬ್ಬ ಸಮೀಪಿಸುತ್ತಿದ್ದು, ಈ ವೇಳೆ ಚಾರ್​ಮಿನಾರ್​ ಬಳಿ ವ್ಯಾಪಾರ ಎಂದಿನಂತೆ ಸಾಗುತ್ತಿತ್ತು. ಮಾಲಿಕರು ಅಂಗಡಿಗಳನ್ನು ತೆರೆದಿದ್ದು, ಗ್ರಾಹಕರು ಆಗಮಿಸುತ್ತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿಗಳನ್ನು ತೆರವು ಮತ್ತು ಬಂದ್​ ಮಾಡುವ ಕಾರ್ಯ ಕೈಗೊಂಡಿದ್ದಾರೆ.

ತೆಲಂಗಾಣ ಲಾಕ್​ಡೌನ್​

ಇನ್ನು ಅಗತ್ಯ ವಸ್ತುಗಳನ್ನು ಖರೀದಿಸಲು ಕೇವಲ ನಾಲ್ಕು ಗಂಟೆ ಅವಧಿ ನೀಡಿದ್ದರಿಂದ ಮಾರ್ಕೆಟ್​ಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದು ಗೋಚರಿಸಿತು.

ಕೆಲ ರೆಸ್ಟೋರೆಂಟ್​ಗಳನ್ನು ಅವಧಿ ಮುಗಿಯುತ್ತಿದ್ದಂತೆ ಬಂದ್​ ಮಾಡಲಾಗಿದೆ. ಆದರೆ ಇನ್ನುಳಿದ ಸಣ್ಣಪುಟ್ಟ ಸ್ಟಾಲ್​ಗಳು, ಮೊಬೈಲ್​ ಕ್ಯಾಂಟೀನ್​ಗಳು ವ್ಯಾಪಾರ ಮುಂದುವರೆಸಿದ್ದವು.

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು, ಕೃಷಿ ಚಟುವಟಿಕೆ, ವೈದ್ಯಕೀಯ ಸೇವೆಗಳು, ಆಸ್ಪತ್ರೆಗಳು, ಮೆಡಿಕಲ್​ ಶಾಪ್​, ಕೋಲ್ಡ್​ ಸ್ಟೋರೇಜ್​, ಬ್ಯಾಂಕಿಂಗ್ ಕ್ಷೇತ್ರಗಳು ಮತ್ತು ಮಾಧ್ಯಮಗಳಿಗೆ ಲಾಕ್‌ಡೌನ್ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲಾಗಿದೆ.

ಕೋವಿಡ್ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಕೆಲಸ ಮಾಡಲು ಅನುಮತಿ ಇದೆ. ಟೆಲಿಕಾಂ, ಇಂಟರ್ನೆಟ್ ಕಂಪನಿಯಲ್ಲಿ ಕನಿಷ್ಠ ಉದ್ಯೋಗಿಗಳೊಂದಿಗೆ ಕೆಲಸ ಮಾಡಬೇಕು. ಇ-ಕಾಮರ್ಸ್, ಹೋಮ್ ಡೆಲಿವರಿ ಸೇವೆಗಳು, ನಿರ್ಮಾಣ ವಲಯಕ್ಕೆ ಲಾಕ್‌ಡೌನ್ ಗಂಟೆಗಳಲ್ಲಿ ಕೆಲಸ ಮಾಡಲು ಅನುಮತಿ ಇದೆ ಎಂದು ತಿಳಿಸಿದೆ.

ಹಾಲು, ತರಕಾರಿಗಳು, ಡೈರಿ ಉತ್ಪನ್ನಗಳಿಗೆ ಅನುಮತಿ ಇದ್ದು, ಆರ್​ಟಿಸಿ ಸೇವೆಗಳು ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಕಾರ್ಯನಿರ್ವಹಿಸುತ್ತಿವೆ.

ABOUT THE AUTHOR

...view details