ಕರ್ನಾಟಕ

karnataka

ETV Bharat / bharat

ವಕೀಲ ದಂಪತಿ ಕೊಲೆ ಖಂಡಿಸಿ ನ್ಯಾಯವಾದಿಗಳ ಪ್ರತಿಭಟನೆ.. ಸುಮೊಟೊ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್​! - ವಕೀಲ ದಂಪತಿ ಕೊಲೆ ಪ್ರಕರಣ,

ಹೈಕೋರ್ಟ್ ವಕೀಲ ದಂಪತಿ ಹತ್ಯೆ ಖಂಡಿಸಿ ತೆಲಂಗಾಣ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾರೆ. ಹೈಕೋರ್ಟ್ ಈ ಪ್ರಕರಣವನ್ನು ಸುಮೊಟೊ ಎಂದು ಪರಿಗಣಿಸಿದೆ.

lawyer couple murder case as sumoto, HC takes lawyer couple murder case as sumoto, lawyer couple murder case, lawyer couple murder case news, ವಕೀಲ ದಂಪತಿ ಕೊಲೆ ಪ್ರಕರಣ ಸುಮೊಟೊ ಎಂದು ಪರಿಗಣನೆ, ವಕೀಲ ದಂಪತಿ ಕೊಲೆ ಪ್ರಕರಣ ಸುಮೊಟೊ ಎಂದು ಪರಿಗಣಿಸಿದ ಹೈಕೋರ್ಟ್​, ವಕೀಲ ದಂಪತಿ ಕೊಲೆ ಪ್ರಕರಣ, ವಕೀಲ ದಂಪತಿ ಕೊಲೆ ಪ್ರಕರಣ ಸುದ್ದಿ,
ವಕೀಲ ದಂಪತಿ ಕೊಲೆ ಖಂಡಿಸಿ ರಾಜ್ಯದ್ಯಂತ ನ್ಯಾಯವಾದಿಗಳ ಪ್ರತಿಭಟನೆ

By

Published : Feb 18, 2021, 2:43 PM IST

ಹೈದರಾಬಾದ್​: ವಕೀಲರಾದ ವಮನ್ನರಾವ್ ಮತ್ತು ನಾಗಮಣಿ ಅವರ ಹತ್ಯೆಗೆ ತೆಲಂಗಾಣ ಹೈಕೋರ್ಟ್ ಪ್ರತಿಕ್ರಿಯಿಸಿದೆ. ಈ ಪ್ರಕರಣವನ್ನು ಸುಮೊಟೊ ಎಂದು ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಸಿಜೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಕೀಲ ದಂಪತಿ ಕೊಲೆ ಖಂಡಿಸಿ ರಾಜ್ಯಾದ್ಯಂತ ನ್ಯಾಯವಾದಿಗಳ ಪ್ರತಿಭಟನೆ

ಕೊಲೆ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ನಿಗದಿತ ಸಮಯದೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ನ್ಯಾಯಮಂಡಳಿ ಈ ಪ್ರಕರಣದ ಬಗ್ಗೆ ಪ್ರಮುಖ ಹೇಳಿಕೆ ನೀಡಿದೆ. ವಕೀಲರ ಹತ್ಯೆ ಸರ್ಕಾರದ ನಂಬಿಕೆಯನ್ನು ಪ್ರಶ್ನಿಸುವುದಕ್ಕಾಗಿ ಮತ್ತು ಸರ್ಕಾರವು ನಂಬಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಸಾಕ್ಷ್ಯವನ್ನು ರಕ್ಷಾಕವಚದಲ್ಲಿ ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ. ವಕೀಲರ ಕೊಲೆ ಪ್ರಕರಣದ ವಿಚಾರಣೆಯನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿದೆ.

ವಕೀಲರ ಹತ್ಯೆಯನ್ನು ಖಂಡಿಸಿ ಹೈಕೋರ್ಟ್‌ನಲ್ಲಿ ವಕೀಲರು ಕೆಲಸ ಬಹಿಷ್ಕರಿಸಿದರು. ವಿಚಾರಣೆಗೆ ಬರುವ ಎಲ್ಲ ಪ್ರಕರಣಗಳನ್ನು ಬಹಿಷ್ಕರಿಸುವುದಾಗಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ​​ಇಂದು ಪ್ರಕಟಿಸಿದೆ. ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯಗಳು, ನಾಂಪಲ್ಲಿ, ಸಿಕಂದರಾಬಾದ್ ಸಿಟಿ ಸಿವಿಲ್ ಕೋರ್ಟ್ ಮತ್ತು ಕೂಕಟ್​ಪಲ್ಲಿ ನ್ಯಾಯಾಲಯಗಳಲ್ಲಿನ ವಕೀಲರು ತಮ್ಮ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆಗೆ ಸಾಥ್​ ನೀಡಿದರು.

ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದರಿಂದ ಎಲ್‌ಬಿ ನಗರ - ದಿಲ್​ಸುಖ್‌ನಗರ ಮಾರ್ಗದಲ್ಲಿ ವಾಹನಗಳ ದಟ್ಟಣೆಗಳಿಂದ ಕೂಡಿತ್ತು. ಬಿಜೆಪಿ ಎಂಎಲ್ಸಿ ರಾಮಚಂದ್ರ ರಾವ್ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ತೆಲಂಗಾಣದ ವಕೀಲರಿಗೆ ರಕ್ಷಣೆ ಇಲ್ಲ ಎಂದು ಹಲವರು ಆರೋಪಿಸಿದರು.

ವಾಮನ್‌ರಾವ್ ದಂಪತಿಯ ಹತ್ಯೆಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಪರಾಧಿಗಳನ್ನು ಗಲ್ಲಿಗೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಈ ಘಟನೆಯ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು ಮತ್ತು ಹೈಕೋರ್ಟ್ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪೆದ್ದಪಲ್ಲಿ ಜಿಲ್ಲೆಯ ರಾಮಗಿರಿ ತಾಲೂಕಿನ ಕಲ್ವಾಚಾರ್ಲಾದಲ್ಲಿ ಬುಧವಾರ ಹೈಕೋರ್ಟ್ ವಕೀಲರಾದ ಗಟ್ಟು ವಾಮನ್‌ರಾವ್ (49) ಮತ್ತು ನಾಗಮಣಿ (45) ದಂಪತಿಯನ್ನು ಅಪರಿಚಿತ ವ್ಯಕ್ತಿಗಳು ಅಮಾನುಷವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಒಂದು ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.

ABOUT THE AUTHOR

...view details