ಹೈದರಾಬಾದ್ (ತೆಲಂಗಾಣ): ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಿಧಿಸಿರುವ ದಂಡದ ರಿಯಾಯಿತಿಗೆ ತೆಲಂಗಾಣ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ 3 ದಿನಗಳಲ್ಲಿ 39 ಕೋಟಿ ರೂ.ಗಳ ದಂಡ ಸಂಗ್ರಹವಾಗಿದೆ.
ಪಾವತಿಸದ ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳನ್ನು ಹೊಂದಿರುವ ವಾಹನ ಮಾಲೀಕರು ಮತ್ತು ಆರ್ಟಿಸಿ ಚಾಲಕರಿಗೆ ದೊಡ್ಡ ರಿಲೀಫ್ ಆಗಿ ತೆಲಂಗಾಣ ಪೊಲೀಸರು ಬಾಕಿ ಉಳಿದಿರುವ ಬಿಲ್‌ಗಳನ್ನು ತೆರವುಗೊಳಿಸಲು ಒಂದು ಅವಕಾಶ ನೀಡಿದ್ದಾರೆ. ಬಾಕಿ ಇರುವ ದಂಡ ಪಾವತಿಗೆ ಮಾರ್ಚ್ 1ರಿಂದ ಮಾರ್ಚ್ 31ರವರೆಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ರಿಯಾಯಿತಿ ನೀಡಿದ್ದಾರೆ.