ಕರ್ನಾಟಕ

karnataka

ETV Bharat / bharat

ಅಕ್ರಮ ಚೀನಾ ಲೋನ್ ಆ್ಯಪ್ ನಿಷೇಧಿಸಲು ಕ್ರಮ ಕೈಗೊಳ್ಳಿ: ಡಿಜಿಪಿಗೆ ತೆಲಂಗಾಣ ಹೈಕೋರ್ಟ್ ಆದೇಶ - telengana news

ಪ್ಲೇಸ್ಟೋರ್​ನಿಂದ ಈ ಲೋನ್ ನೀಡುವ ಆಪ್​ಗಳನ್ನು ತೆಗೆದುಹಾಕುವ ಸಂಬಂಧ ಕ್ರಮ ತೆಗೆದುಕೊಳ್ಳಿ ಎಂದು ಡಿಜಿಪಿ ಮಹೇಂದರ್ ರೆಡ್ಡಿಗೆ ನ್ಯಾಯಾಲಯ ಸೂಚಿಸಿದೆ.

Telangana high court ordered DGP to take steps to ban loan apps
ಲೋನ್ ನೀಡುವ​ ಆ್ಯಪ್‌ಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಿ

By

Published : Feb 4, 2021, 3:25 PM IST

ಹೈದರಾಬಾದ್​: ಲೋನ್ ನೀಡುವ ಅಕ್ರಮ​ ಆಪ್​ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಹೈಕೋರ್ಟ್ ಡಿಜಿಪಿಗೆ ಆದೇಶಿಸಿದೆ. ಪ್ಲೇಸ್ಟೋರ್​ನಿಂದ ಈ ಆಪ್​ಗಳನ್ನು ತೆಗೆದುಹಾಕುವ ಸಂಬಂಧ ಕ್ರಮ ತೆಗೆದುಕೊಳ್ಳಿ ಎಂದು ಡಿಜಿಪಿ ಮಹೇಂದರ್ ರೆಡ್ಡಿಗೆ ಸೂಚಿಸಿದೆ.

ವಕೀಲ ಕಲ್ಯಾಣ್ ದೀಪ್ ಸಲ್ಲಿಸಿದ್ದ ಪ್ರಕರಣವನ್ನು ಸಿಜೆ ಪೀಠ ಇಂದು ವಿಚಾರಣೆ ನಡೆಸಿತು. ಚೀನಾ ಸಾಲ ಆ್ಯಪ್‌ಗಳ ಕಿರುಕುಳದಿಂದಾಗಿ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಸೆಳೆದರು.

ಈ ಸಂಬಂಧ ವಾದ ವಿವಾದ ಆಲಿಸಿದ ನ್ಯಾಯಾಲಯ, ಆಪ್​ನ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದೆ. ಈ ಸಂಬಂಧ ವಿಚಾರಣೆಯನ್ನು ಮಾರ್ಚ್ 18 ಕ್ಕೆ ಮುಂದೂಡಲಾಗಿದೆ.

ABOUT THE AUTHOR

...view details