ಹೈದರಾಬಾದ್: ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಂಧನದ ವಿರುದ್ಧ ರ್ಯಾಲಿ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮುತ್ತಿನನಗರಿಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ನಡ್ಡಾ ಅವರು ನಗರದಲ್ಲಿ ತಮ್ಮ ಉದ್ದೇಶಿತ ರ್ಯಾಲಿಗಾಗಿ ಹೈದರಾಬಾದ್‌ಗೆ ಆಗಮಿಸಿದ್ದರು. ತೆಲಂಗಾಣ ಬಿಜೆಪಿ ನಾಯಕರು ಅವರನ್ನು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕೇಯ ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ, ತೆಲಂಗಾಣದಲ್ಲಿ ಕೋವಿಡ್ ನಿಯಮಗಳು ಜಾರಿಯಲ್ಲಿದ್ದು, ರ್ಯಾಲಿಗೆ ಯಾವುದೇ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದರು ಎಂದು ನಡ್ಡಾ ಹೇಳಿದರು.
ಕೋವಿಡ್ ನಿಯಮಗಳಿಂದಾಗಿ ಸಿಕಂದರಾಬಾದ್‌ನಲ್ಲಿ ಕ್ಯಾಂಡಲ್ ರ್ಯಾಲಿಗೆ ಅನುಮತಿ ಇಲ್ಲವೆಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ. ನಾನು ಎಲ್ಲಾ ನಿಯಮಗಳನ್ನು ಅನುಸರಿಸುತ್ತೇನೆ ಎಂದು ಪೊಲೀಸರಿಗೆ ಹೇಳಿದ್ದೇನೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ನನಗೆ ನೋಟಿಸ್ ನೀಡಬಹುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಒಂದೇ ಕಾಲಲ್ಲಿ 750 ಕಿಮೀ ದೂರ ಸಾಗಿಬಂದು ಅಯ್ಯಪ್ಪನ ದರ್ಶನ ಪಡೆದ ವಿಶೇಷಚೇತನ!
ಬಿಜೆಪಿ ಕ್ಯಾಂಡಲ್ ಲೈಟ್ ರ್ಯಾಲಿಗೆ ನಾವು ಅನುಮತಿ ನೀಡಿಲ್ಲ. ರ್ಯಾಲಿಗೆ ಅನುಮತಿ ನೀಡಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಆನಂದ್ ಸ್ಪಷ್ಟಪಡಿಸಿದ್ದಾರೆ.
ರಾಣಿಗುಂಜ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಿಂದ ಸಿಕಂದರಾಬಾದ್‌ನ ಪ್ಯಾರಡೈಸ್ ಎಕ್ಸ್ ರೋಡ್‌ವರೆಗೆ ಸಂಜೆ ಕ್ಯಾಂಡಲ್ ರ್ಯಾಲಿ ನಡೆಸುವುದು ಬಿಜೆಪಿ ಮುಖ್ಯಸ್ಥರ ಉದ್ದೇಶವಾಗಿತ್ತು.