ಹೈದರಾಬಾದ್ :ಕೋವಿಡ್ ಪ್ರಕರಣಗಳ ತೀವ್ರತೆ ಹಾಗೂ ಸೋಂಕಿತರನ್ನು ಪತ್ತೆ ಹಚ್ಚಲು ತೆಲಂಗಾಣ ಸರ್ಕಾರ ಇಂದಿನಿಂದ ಮನೆ-ಮನೆ ಜ್ವರ ಸಮೀಕ್ಷೆಗೆ ಮುಂದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದಿನಿಂದ ಸಮೀಕ್ಷೆ ಪ್ರಾರಂಭವಾಗಿದೆ. ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದೇ ಇದರ ಮುಖ್ಯ ಗುರಿಯಾಗಿದೆ.
ಜ್ವರ ಸಮೀಕ್ಷೆಯ ಸಹಾಯದಿಂದ ವೈದ್ಯಕೀಯ ಸಿಬ್ಬಂದಿ ಔಷಧಿ ಕಿಟ್‌ಗಳನ್ನು ಪೂರೈಸುತ್ತಾರೆ. ಕೋವಿಡ್‌ನಿಂದ ಬಳಲುತ್ತಿರುವವರನ್ನು ತಕ್ಷಣವೇ ಪ್ರತ್ಯೇಕಿಸುತ್ತಾರೆ. ಇದು ಒಮಿಕ್ರಾನ್ ರೂಪಾಂತರ ಹರಡುವಿಕೆಯ ಸರಪಳಿ ಮುರಿಯಲು ನೆರವಾಗಲಿದೆ ಎಂದು ಹೇಳಲಾಗಿದೆ.