ಹೈದರಾಬಾದ್ (ತೆಲಂಗಾಣ): ತೆಲಂಗಾಣ ಸರ್ಕಾರವು ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯದ ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ ಆರ್ಥಿಕ ಸಹಾಯವಾಗಿ ಪ್ರತಿ ತಿಂಗಳು 5,000 ರೂಪಾಯಿಗಳ ಗೌರವಧನ ನೀಡುವ ಯೋಜನೆ ತಂದಿದೆ. ಸರ್ಕಾರದ ಈ ಯೋಜನೆಯಿಂದ ಸಾವಿರಾರು ಇಮಾಮ್‌ಗಳು ಮತ್ತು ಮುಜಿನ್‌ಗಳು ಇದರ ಪ್ರಯೋಜನ ಪಡೆಯಲಿದ್ದಾರಂತೆ. ಸಿಎಂ ಆದೇಶದ ಮೇರೆಗೆ ತೆಲಂಗಾಣ ವಕ್ಫ್ ಬೋರ್ಡ್ ಮೂಲಕ ರಾಜ್ಯದ ಎಲ್ಲ ಮಸೀದಿಗಳಿಗೆ ಈ ಮೊತ್ತವನ್ನು ವಿತರಿಸಲಾಗುತ್ತದೆಯಂತೆ. ಹಲವು ಮುಸ್ಲಿಂ ಮುಖಂಡರು ಈ ಯೋಜನೆಯನ್ನು ಸ್ವಾಗತಿಸಿದ್ದಾರೆ.
ಇಮಾಮ್-ಮುಜಿನ್‌ಗಳಿಗೆ ಮಾಸಿಕ ₹ 5 ಸಾವಿರ ಗೌರವಧನ: ತೆಲಂಗಾಣ ಸರ್ಕಾರದ ಆದೇಶ - ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್‌ಗಳು
ತೆಲಂಗಾಣ ಸರ್ಕಾರವು ರಾಜ್ಯದ ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ 5,000 ರೂಪಾಯಿಗಳ ಮಾಸಿಕ ವೇತನವನ್ನು ನೀಡುವ ಯೋಜನೆ ತಂದಿದೆ. ಹಲವು ಮುಸ್ಲಿಂ ಮುಖಂಡರು ಈ ಯೋಜನೆಯನ್ನು ಸ್ವಾಗತಿಸಿದ್ದಾರೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ಇಮಾಮ್ ಹಫೀಜ್ ಮೊಹಮ್ಮದ್ ಅಬ್ದುಲ್ಲಾ, "ನಾನು ಕಳೆದ 8 ರಿಂದ 10 ವರ್ಷಗಳಿಂದ ಮೊಹಮ್ಮದ್ ಲೇನ್‌ನ ಜಾಮಾ ಮಸೀದಿಯಲ್ಲಿ ಇಮಾಮ್ ಆಗಿದ್ದೇನೆ. ನಮಗೆ 5,000 ರೂಪಾಯಿಗಳ ಮಾಸಿಕ ವೇತನವನ್ನು ನೀಡುವ ಯೋಜನೆ ತಂದಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಧನ್ಯವಾದ ಹೇಳಲು ಬಯಸುವೆ. ಇದು ಹೀಗೆ ಮುಂದುವರಿಯಲಿ ಅನ್ನೋದು ನಮ್ಮ ಭಾವನೆ.
ಸಂಸದ ಓವೈಸಿ ಮತ್ತು ಸ್ಥಳೀಯ ಶಾಸಕರಿಗೂ ನಾನು ಧನ್ಯವಾದ ತಿಳಿಸುತ್ತೇನೆ, ನೀವು ನಮಗೆ ನೀಡುತ್ತಿರುವ ಪ್ರತಿಯೊಂದು ಮೊತ್ತವೂ ಅನನ್ಯ. ಈ ಹಿಂದಿನ ಯಾವುದೇ ಸರ್ಕಾರಗಳು ನಮ್ಮ ಬಗ್ಗೆ ಇಷ್ಟು ಕಾಳಜಿ ವಹಿಸಿರಲಿಲ್ಲ. ಆದರೆ, ಕೆಸಿಆರ್ ಸರ್ ಅದನ್ನು ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.