ತೆಲಂಗಾಣ: ಆಸ್ಪತ್ರೆಯಲ್ಲಿ ಯುವತಿ ಮೇಲೆ ನಾಲ್ವರು ಕಿರಾತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತೆಲಂಗಾಣದ ನಿಜಾಮಬಾದ್‌ನ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಕಾಮುಕರು ಮೊದಲಿಗೆ ಯುವತಿಗೆ ಮದ್ಯಪಾನ ಮಾಡಿಸಿ ಆಸ್ಪತ್ರೆಯ ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ, ಆ ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.