ಕರ್ನಾಟಕ

karnataka

ETV Bharat / bharat

ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​..ಆರೋಪಿ ಶಾಸಕನ ಮಗ ಪರಾರಿ! - ತೆಲಂಗಾಣ ಕುಟುಂಬ ಆತ್ಮಹತ್ಯೆ ಪ್ರಕರಣ ತಿರುವು

ತೆಲಂಗಾಣದಲ್ಲಿ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಎಂಎಲ್​ಎ ಮಗ ಈಗ ಪರಾರಿಯಾಗಿದ್ದಾನೆ.

Palvancha family suicide case  Telangana family suicide case twist  Telangana crime news  ಪಲ್ವಂಚ ಕುಟುಂಬ ಆತ್ಮಹತ್ಯೆ ಪ್ರಕರಣ  ತೆಲಂಗಾಣ ಕುಟುಂಬ ಆತ್ಮಹತ್ಯೆ ಪ್ರಕರಣ ತಿರುವು  ತೆಲಂಗಾಣ ಅಪರಾಧ ಪ್ರಕರಣಗಳ ಸುದ್ದಿ
ತೆಲಂಗಾಣ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​

By

Published : Jan 4, 2022, 12:23 PM IST

ಭದ್ರಾದ್ರಿ ಕೊತ್ತಗುಡೇಂ( ತೆಲಂಗಾಣ):ಪಲ್ವಂಚದಲ್ಲಿ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವ ಪಡೆದುಕೊಂಡಿದೆ. ಈ ಪ್ರಕರಣದ ಪ್ರಮುಖ ತಿರುವುಗಳ ಕುರಿತು ಜಿಲ್ಲೆಯ ಪೊಲೀಸರು ಬಹಿರಂಗಪಡಿಸಿದ್ದಾರೆ.

ಏನಿದು ಘಟನೆ?: ಜಿಲ್ಲೆಯ ಹಳೆ ಪಲ್ವಂಚದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕುಟುಂಬವೊಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿತ್ತು. ಘಟನಾ ಸ್ಥಳದಲ್ಲಿ ಡೆತ್​ ನೋಟ್​ ಪತ್ತೆಯಾದ ನಂತರ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಖಚಿತಪಡಿಸಿದ್ದರು.

ಈ ಘಟನೆಯಲ್ಲಿ ದಂಪತಿ ಸೇರಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತ್ತೊಬ್ಬ ಮಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸಿಪಿ ರೋಹಿತ್ ಈ ಮೊದಲು ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕೊತ್ತಗುಡೇಂ ಶಾಸಕ ವನಮಾ ವೆಂಕಟೇಶ್ವರರಾವ್ ಅವರ ಪುತ್ರ ರಾಘವೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಾಘವೇಂದ್ರ ಪರಾರಿಯಾಗಿದ್ದಾನೆ ಎಂದು ಎಎಸ್ಪಿ ತಿಳಿಸಿದ್ದಾರೆ.

ಆರೋಪಿ ಎಂಎಲ್​ಎ ಮಗ ಪರಾರಿ

ನಾಗ ರಾಮಕೃಷ್ಣ ಮತ್ತು ಶ್ರೀಲಕ್ಷ್ಮಿ ದಂಪತಿಗೆ ಸಾಹಿತ್ಯ ಮತ್ತು ಸಾಹಿತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಹಳೆಯ ಪಲ್ವಂಚದ ಪೂರ್ವ ಬಜಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ರಾಮಕೃಷ್ಣ ಪಲ್ವಂಚದಲ್ಲಿ ಮೀ ಸೇವಾ ಕೇಂದ್ರ ಹೊಂದಿದ್ದರು. ಅವನು ಅದನ್ನು ಇತ್ತೀಚೆಗೆ ಗುತ್ತಿಗೆಗೆ ಕೊಟ್ಟನು.

ನಂತರ ಕುಟುಂಬವು ರಾಜಮಹೇಂದ್ರ ವರಂಗೆ ತೆರಳಿತು. 20 ದಿನಗಳ ಹಿಂದೆ ಅವರು ಪಲ್ವಂಚಕ್ಕೆ ಮರಳಿದರು. ಬಳಿಕ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲ್ಲಿಸಾಹಿತಿ, ಪತ್ನಿ ಹಾಗೂ ಪತಿ ಮೃತಪಟ್ಟಿದ್ದು, ಸಾಹಿತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.

ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಪ್ರಾಥಮಿಕವಾಗಿ ಮಾಹಿತಿ ಬಂದಿದ್ದರೂ, ಪೊಲೀಸರಿಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಮೇರೆಗೆ ಇದೊಂದು ಆತ್ಮಹತ್ಯೆ ಎಂದು ಭಾವಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್​ ತಂಡ ರಾಮಕೃಷ್ಣ ಅವರ ಕಾರಿನಲ್ಲಿ ಕೆಲವು ಪ್ರಮುಖ ದಾಖಲೆಗಳು ಮತ್ತು ಬಿಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಎಂಎಲ್​ಎ ಮಗ ರಾಘವೇಂದ್ರ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುಲು ಜಾಲ ಬೀಸಿದ್ದಾರೆ.

ಡೆತ್​ನೋಟ್​ನಲ್ಲಿ ಏನೀದೆ:ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಶಾಸಕ ವನಮಾ ಅವರ ಪುತ್ರ ರಾಘವೇಂದ್ರ ಅವರ ಹೆಸರಿದೆ. ಅವರ ಜೊತೆಗೆ ರಾಮಕೃಷ್ಣ ಅವರ ತಾಯಿ ಸೂರ್ಯಾವತಿ ಮತ್ತು ಅಕ್ಕ ಮಾಧವಿ ಅವರ ಹೆಸರುಗಳಿವೆ. ರಾಮಕೃಷ್ಣ ಅವರ ಅಕ್ಕ ಮಾಧವಿಯೊಂದಿಗೆ ರಾಘವೇಂದ್ರ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ರಾಮಕೃಷ್ಣ ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ಹೇಳಿದ್ದು ಹೀಗೆ:ರಾಮಕೃಷ್ಣ ಕುಟುಂಬದ ಆತ್ಮಹತ್ಯೆ ಘಟನೆಗೆ ವನಮಾ ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ. ರಾಮಕೃಷ್ಣ ಕುಟುಂಬದ ಆತ್ಮಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಮಧ್ಯಸ್ಥಿಕೆ ಇಲ್ಲದೇ ನನ್ನ ಹೆಸರನ್ನು ಏಕೆ ಬರೆದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆತ್ಮಹತ್ಯೆ ಮಾಡಿಕೊಂಡರೆ ನನಗೇನು ಸಂಬಂಧ ಎಂದು ಪ್ರಶ್ನಿಸಿದರು. ಘಟನೆಯ ಸಂಪೂರ್ಣ ತನಿಖೆಯಾಗಲಿ. ಇದರಲ್ಲಿ ನಾನು ಆರೋಪಿಯಾಗಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದು ಹೇಳಿದರು.

ರಾಮಕೃಷ್ಣರಿಗೆ ಅಮ್ಮನನ್ನು ನೋಡಿಕೊಳ್ಳಲು ಹೇಳಿದ್ದು ಅಪರಾಧವೇ. ಕೆಲವರು ಉದ್ದೇಶಪೂರ್ವಕವಾಗಿ ನನ್ನನ್ನು ಬಂಧಿಸಲು ಸಂಚು ಮಾಡುತ್ತಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಯನ್ನು ತಡೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ. ಯಾವುದೇ ವಿಚಾರಣೆಗೂ ಸಿದ್ಧ, ಹಿಂದೆ ಸರಿಯುವುದಿಲ್ಲ ಎಂದು ಗುಪ್ತ ಸ್ಥಳದಿಂದ ವಿಡಿಯೋ ರೆಕಾರ್ಡ್​ ಮಾಡಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details