ವಿಜಯವಾಡ(ಆಂಧ್ರಪ್ರದೇಶ) :ಸಾಲಬಾಧೆಯಿಂದಾಗಿ ತೆಲಂಗಾಣದ ಕುಟುಂಬವೊಂದರ ನಾಲ್ವರು ಸದಸ್ಯರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಲತಾ(54), ಆಶಿಷ್(22), ಸುರೇಶ್ (56) ಹಾಗೂ ಅಖಿಲ್(28) ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ತೆಲಂಗಾಣದ ಈ ಕುಟುಂಬ ಆಂಧ್ರಪ್ರದೇಶದ ವಿಜಯವಾಡದಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿತ್ತು. ಇಲ್ಲಿನ ಹೋಟೆಲ್ ಒಂದರಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡಿದ್ದರು. ಕೆಲ ದಿನಗಳಿಂದ ಇಲ್ಲೇ ಇದ್ದ ಕುಟುಂಬಸ್ಥರು, 'ಸಾಲಬಾಧೆಯಿಂದ ಜೀವನ ಕಷ್ಟವಾಗುತ್ತಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ' ಎಂದು ತಮ್ಮ ಸಂಬಂಧಿಯೊಬ್ಬರಿಗೆ ವಾಯ್ಸ್ ಸಂದೇಶ ಕಳುಹಿಸಿದ್ದರು.
ಇದರಿಂದ ಗಾಬರಿಯಾದ ಸಂಬಂಧಿಕರು ಹೋಟೆಲ್ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸಿಬ್ಬಂದಿ ಅವರಿದ್ದ ರೂಮ್ಗೆ ಬಂದು ಪರಿಶೀಲಿಸಿದಾಗ ತಾಯಿ ಶ್ರೀಲತಾ ಮತ್ತು ಪುತ್ರ ಆಶಿಷ್ ವಿಷ ಸೇವನೆಯಿಂದ ಸಾವನ್ನಪ್ಪಿದ್ದು ದೃಢಪಟ್ಟಿದೆ.