ಹೈದರಾಬಾದ್ (ತೆಲಂಗಾಣ): ತೆಲಂಗಾಣದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿದೇಶದಿಂದ ಹುಟ್ಟೂರಿಗೆ ಬರಲು 2.5 ಲಕ್ಷ ರೂಪಾಯಿ ಖರ್ಚು ಮಾಡಿದರೂ, ತಮ್ಮ ಮತ ಹಕ್ಕು ಚಲಾಯಿಸಲು ಸಾಧ್ಯವಾಗಲಿಲ್ಲ. ಮಂಚಿರ್ಯಾಲ ಜಿಲ್ಲೆಯ ಜನ್ನಾರಾಮ್ ಮಂಡಲದ ಚಿಂತಗುಡ ಗ್ರಾಮದ ಪುದರಿ ಶ್ರೀನಿವಾಸ್ ಎಂಬುವವರೇ ವೋಟಿಂಗ್ ಮಿಸ್ ಮಾಡಿಕೊಂಡು ವ್ಯಕ್ತಿ.
ಕಳೆದ 15 ವರ್ಷಗಳಿಂದ ನ್ಯೂಜಿಲೆಂಡ್ನ ಕಂಪನಿಯೊಂದರಲ್ಲಿ ಪುದರಿ ಶ್ರೀನಿವಾಸ್ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚುನಾವಣಾ ಸಂದರ್ಭದಲ್ಲಿಯೇ ಹುಟ್ಟೂರಿಗೆ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಶ್ರೀನಿವಾಸ್ ಅವರ ಸ್ನೇಹಿತರೊಬ್ಬರು ಮತದಾರರ ಪಟ್ಟಿಯನ್ನೂ ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ಅದರಲ್ಲಿ ಶ್ರೀನಿವಾಸ್ ಮತ್ತು ಅವರ ಪತ್ನಿ ಲಾವಣ್ಯ ಹೆಸರುಗಳು ಇದ್ದವು. ಹೀಗಾಗಿ ಹುಟ್ಟೂರಿಗೆ ಬಂದು ಪೋಷಕರೊಂದಿಗೆ ಕಾಲ ಕಳೆಯುವುದರ ಜೊತೆಗೆ ಮತದಾನ ಮಾಡುವ ಲೆಕ್ಕಾಚಾರ ಹೊಂದಿದ್ದರು.
ಇದನ್ನೂ ಓದಿ:ತೆಲಂಗಾಣ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್: ಆ್ಯಪ್, ವೆಬ್‌ಸೈಟ್‌ಗಳೇ ಅಡ್ಡೆಗಳು!
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತ ಪಡಿಸಿಕೊಂಡಿದ್ದ ಶ್ರೀನಿವಾಸ್ ವಿಮಾನ ಟಿಕೆಟ್ ಕಾಯ್ದಿರಿಸಿದರು. ಅಂತೆಯೇ, ವಾರದ ಹಿಂದೆ ದಂಪತಿ ಸಮೇತವಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಮತದಾನದ ದಿನವಾದ ನಿನ್ನೆ, ನವೆಂಬರ್ 30ರಂದು ಶ್ರೀನಿವಾಸ್ 296ನೇ ಮತಗಟ್ಟೆಗೆ ತೆರಳಿದ್ದರು. ಆದರೆ, ಈ ವೇಳೆ ಅಚ್ಚರಿ ಕಾದಿತ್ತು. ಮತದಾರರ ಪಟ್ಟಿಯಲ್ಲಿ ಪತ್ನಿಯ ಹೆಸರು ಮಾತ್ರ ಇತ್ತು. ಆಗ ಶ್ರೀನಿವಾಸ್ ತಮ್ಮ ಬಳಿಯಿದ್ದ ಈ ಹಿಂದಿನ ಮತದಾರರ ಪಟ್ಟಿ ತೋರಿಸಿದ್ದಾರೆ.