ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಶಾಲೆಗಳು ಪುನಾರಂಭ.. ಖುಷಿ ಖುಷಿಯಾಗಿ ತರಗತಿಗಳಿಗೆ ತೆರಳಿದ ವಿದ್ಯಾರ್ಥಿಗಳು - Department of Education

ಕೊರೊನಾ ಸಾಂಕ್ರಾಮಿಕದಿಂದಾಗಿ ತೆಲಂಗಾಣದಲ್ಲಿ 2020ರ ಮಾರ್ಚ್ 22ರಂದು ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ಪುನಾರಂಭಗೊಂಡಿವೆ. ವಿದ್ಯಾರ್ಥಿಗಳೆಲ್ಲರೂ ಖುಷಿಯಿಂದ ಶಾಲೆಗಳಿಗೆ ಆಗಮಿಸಿದ್ದಾರೆ.

Telangana Educational Institutions Reopened today
ತೆಲಂಗಾಣದಲ್ಲಿ ಪುನಾರಂಭಗೊಂಡ ಶಾಲೆಗಳು

By

Published : Feb 1, 2021, 3:41 PM IST

ಹೈದರಾಬಾದ್​: ಬರೋಬ್ಬರಿ 10 ತಿಂಗಳ ಸುದೀರ್ಘ ವಿರಾಮದ ಬಳಿಕ ತೆಲಂಗಾಣದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ.

15 ದಿನಗಳ ಬಳಿಕ 6ರಿಂದ 8ನೇ ತರಗತಿಗಳನ್ನು ಪ್ರಾರಂಭಿಸುವ ಯೋಜನೆಯಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಆನ್​ಲೈನ್ ಮತ್ತು ಡಿಜಿಟಲ್​​​ ಕ್ಲಾಸ್​​ ಮುಂದುವರೆಯಲಿದೆ. ಈ ವರ್ಷ ಪರೀಕ್ಷೆ ಬರೆಯಲು ಕನಿಷ್ಠ ಹಾಜರಾತಿಯ ಅವಶ್ಯಕತೆಯಿಲ್ಲ. ಮಾಧ್ಯಮಿಕ ಶಾಲಾ ಪ್ರಮಾಣಪತ್ರ (ಎಸ್‌ಎಸ್‌ಸಿ) ಪರೀಕ್ಷೆಗಳು ಮೇ 17 ರಿಂದ 26 ರವರೆಗೆ ನಡೆಯಲಿವೆ ಎಂದು ತೆಲಂಗಾಣ ಶಿಕ್ಷಣ ಇಲಾಖೆ ತಿಳಿಸಿದೆ.

ತೆಲಂಗಾಣದಲ್ಲಿ ಶಾಲೆಗಳು ಪುನಾರಂಭ

ಇದನ್ನೂ ಓದಿ: ಬಜೆಟ್​ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಪೆಟ್ರೋಲ್​, ಡೀಸೆಲ್​ ದರ ಮತ್ತಷ್ಟು ಗಗನಮುಖಿ!

ಕೊರೊನಾ ಸಾಂಕ್ರಾಮಿಕದಿಂದಾಗಿ ರಾಜ್ಯದಲ್ಲಿ 2020ರ ಮಾರ್ಚ್ 22ರಂದು ಶಾಲೆಗಳನ್ನು ಮುಚ್ಚಲಾಗಿತ್ತು. ಮಾಸ್ಕ್​​, ಸ್ಯಾನಿಟೈಸರ್​, ಥರ್ಮಲ್​ ಸ್ಕ್ಯಾನಿಂಗ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲ​ ಕೋವಿಡ್​ ನಿಯಮಗಳನ್ನು ಪಾಲಿಸಿ ಶಾಲೆಗಳು ಆರಂಭಗೊಂಡಿವೆ. ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಕೊಠಡಿಯಲ್ಲಿ ಕೇವಲ 20 ವಿದ್ಯಾರ್ಥಿಗಳು ಮಾತ್ರ ಕೂರಲು ಅವಕಾಶ ನೀಡಲಾಗಿದೆ.

ABOUT THE AUTHOR

...view details