ಹೈದರಾಬಾದ್:ಒಟ್ಟು 5.82 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಶ್ವದ ಅತೀ ದೊಡ್ಡ ಇನ್ನೋವೇಶನ್ ಕ್ಯಾಂಪಸ್, ಬ್ಯುಸಿನೆಸ್ ಇನ್ಕ್ಯುಬೇಟರ್ ಟಿ-ಹಬ್‌ನ ಹೊಸ ಸೌಲಭ್ಯವನ್ನು ಜೂನ್ 28 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಉದ್ಘಾಟಿಸಲಿದ್ದಾರೆ. ಫ್ರಾನ್ಸ್‌ನಲ್ಲಿನ ಸ್ಟೇಷನ್ ಎಫ್ ಎರಡನೇ ಅತೀ ದೊಡ್ಡ ಸ್ಟಾರ್ಟ್ಅಪ್ ಇನ್ಕ್ಯುಬೇಟರ್ ಎಂದು ಪ್ರಕಟಣೆ ತಿಳಿಸಿದೆ.
ತೆಲಂಗಾಣ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಹೈದರಾಬಾದ್ ಇನ್ನೋವೇಶನ್ ಇಕೋಸಿಸ್ಟಮ್‌ಗೆ ದೊಡ್ಡ ಕೊಡುಗೆಯಾಗಿರುವ @THubHyd ನ ಹೊಸ ಸೌಲಭ್ಯವನ್ನು ಗೌರವಾನ್ವಿತ ಸಿಎಂ ಕೆಸಿಆರ್ ಅವರು ಜೂನ್ 28 ರಂದು ಉದ್ಘಾಟಿಸಲಿದ್ದಾರೆ ಎಂದು ಘೋಷಿಸಲು ಸಂತೋಷವಾಗಿದೆ ಎಂದಿದ್ದಾರೆ.
2015 ರಲ್ಲಿ ಸ್ಥಾಪಿತವಾದ ಟಿ-ಹಬ್ (ಟೆಕ್ನಾಲಜಿ ಹಬ್) ಹೈದರಾಬಾದ್‌ನಿಂದ ಹೊರಗಿರುವ ನಾವೀನ್ಯತೆ ಕೇಂದ್ರ. ಟಿ-ಹಬ್ 2.0 ನಾವೀನ್ಯ ಪರಿಸರ ವ್ಯವಸ್ಥೆಯ ಸೂಕ್ಷ್ಮದರ್ಶಕ. ಇದು 2,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ಕಾರ್ಪೊರೇಟ್‌ಗಳು, ಹೂಡಿಕೆದಾರರು, ಅಕಾಡೆಮಿಗಳು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಟಿ-ಹಬ್ ಸಿಇಒ ಶ್ರೀನಿವಾಸ್ ರಾವ್ ಮಹಂಕಾಳಿ ಹೇಳಿದ್ದಾರೆ.