ಹೈದರಾಬಾದ್(ತೆಲಂಗಾಣ):ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೇಲಿಂದ ಮೇಲೆ ವಾಗ್ದಾಳಿ ನಡೆಸುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಇದೀಗ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಅಧಿಕಾರದಿಂದ ಕೆಳಗಿಳಿಸಿ, ಓಡಿಸಲಾಗುವುದು ಎಂದಿದ್ದಾರೆ.
ಜನಗಾಮ್ ಜಿಲ್ಲೆಯ ಯಶವಂತಪುರದಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಕೆಸಿಆರ್, ತೆಲಂಗಾಣಕ್ಕೆ ಸಹಾಯ ಮಾಡುವ ಸರ್ಕಾರವನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ತರುತ್ತೇವೆ ಎಂದರು.
ರಾಜ್ಯದ ಅಭಿವೃದ್ಧಿಗೆ ಎನ್ಡಿಎ ಸರ್ಕಾರ ಬೆಂಬಲ ನೀಡಲು ವಿಫಲವಾದರೆ, ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದಿರುವ ಅವರು, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೋಟೆ ಭೇದಿಸಲು ತಾವು ರಾಷ್ಟ್ರ ರಾಜಕಾರಣದಲ್ಲಿ ಪಾತ್ರ ವಹಿಸುವುದಾಗಿ ತಿಳಿಸಿದ್ದಾರೆ. ನಮಗೆ ರಾಷ್ಟ್ರೀಯ ಯೋಜನೆ, ಮೆಡಿಕಲ್ ಕಾಲೇಜು ನೀಡುತ್ತಿಲ್ಲ. ನೀವು ನಮಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ನರೇಂದ್ರ ಮೋದಿ ಅವರೇ ಎಚ್ಚರದಿಂದ ಇರಿ ಎಂದು ವಾಗ್ದಾಳಿ ನಡೆಸಿದರು.