ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ವ್ಯಾಕ್ಸಿನ್​.. ಕರ್ನಾಟಕದಲ್ಲಿ!?

ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ಮಧ್ಯೆ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕೇಂದ್ರ ಅನುಮತಿ ನೀಡಿದೆ. ಹೀಗಾಗಿ ಕೆಲವೊಂದು ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡ್ತಿವೆ.

CM KCR
CM KCR

By

Published : Apr 24, 2021, 6:04 PM IST

ಹೈದರಾಬಾದ್​:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದೆ. ಇದರ ಮಧ್ಯೆ ಮೇ. 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರೂ ಕೊರೊನಾ ವ್ಯಾಕ್ಸಿನ್​ ಪಡೆದುಕೊಳ್ಳಲು ಅರ್ಹರು ಎಂಬ ಘೋಷಣೆ ಈಗಾಗಲೇ ಕೇಂದ್ರದಿಂದ ಹೊರಬಿದ್ದಿದೆ.

18 ವರ್ಷ ಮೇಲ್ಪಟ್ಟವರು ಕೋವಿಡ್​ ವ್ಯಾಕ್ಸಿನ್​ ಪಡೆದುಕೊಳ್ಳಲು ಕೇಂದ್ರ ಸರ್ಕಾರ ದರ ನಿಗದಿ ಮಾಡಿದೆ. ಆದರೆ, ಇದರ ಮಧ್ಯೆ ಅನೇಕ ರಾಜ್ಯಗಳು ತಮ್ಮ ರಾಜ್ಯದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡುವುದಾಗಿ ಘೋಷಣೆ ಮಾಡ್ತಿದ್ದು, ಆ ಸಾಲಿಗೆ ಇದೀಗ ತೆಲಂಗಾಣ ಸಹ ಸೇರ್ಪಡೆಯಾಗಿದೆ.

ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸೋಂ, ಛತ್ತೀಸ್​​​ಗ​ಢ, ಕೇರಳ, ಜಾರ್ಖಂಡ್​ ಉಚಿತವಾಗಿ ಕೊರೊನಾ ವ್ಯಾಕ್ಸಿನ್​ ನೀಡುವುದಾಗಿ ಹೇಳಿಕೊಂಡಿದೆ. ಬೇರೆ ರಾಜ್ಯಗಳಿಂದ ತೆಲಂಗಾಣಕ್ಕೆ ಬಂದು ಕೆಲಸ ಮಾಡುವವರು ಈ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೆಸಿಆರ್ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ 2500 ಕೋಟಿ ರೂ. ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜನರ ಪ್ರಾಣಕ್ಕಿಂತ ನಮಗೆ ಬೇರೆ ಯಾವುದು ಮಹತ್ವದ್ದಲ್ಲ. ಈಗಾಗಲೇ ರಾಜ್ಯದಲ್ಲಿ 35 ಲಕ್ಷ ಜನರಿಗೆ ವ್ಯಾಕ್ಸಿನ್​ ನೀಡಲಾಗಿದೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಿಎಸ್​​ ಸೋಮೇಶ್​ ಕುಮಾರ್ ಎಲ್ಲ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಆದೇಶ ಪ್ರತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details