ಕರ್ನಾಟಕ

karnataka

ETV Bharat / bharat

ಪ್ರವಾಹ ಪೀಡಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ಘೋಷಿಸಿದ ತೆಲಂಗಾಣ ಸಿಎಂ - Telangana Chief Minister KCR has ordered the release of Rs1 crore each to district administrations

ಇಂದು ಸಿಎಂ ಕೆಸಿಆರ್ ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಪ್ರವಾಹ ಪೀಡಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ಘೋಷಿಸಿದ ತೆಲಂಗಾಣ ಸಿಎಂ
ಪ್ರವಾಹ ಪೀಡಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ಘೋಷಿಸಿದ ತೆಲಂಗಾಣ ಸಿಎಂ

By

Published : Jul 17, 2022, 4:48 PM IST

ಹೈದರಾಬಾದ್​(ತೆಲಂಗಾಣ): ಮುಳುಗು, ಭೂಪಾಲಪಲ್ಲಿ, ಕೊತ್ತಗುಡೆಂ, ಮಹಬೂಬಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳಿಗೆ ತಕ್ಷಣದ ಪ್ರವಾಹ ಪರಿಹಾರ ನೆರವಾಗಿ ತಲಾ ರೂ.1 ಕೋಟಿ ಬಿಡುಗಡೆ ಮಾಡಲು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರು ಆದೇಶಿಸಿದ್ದಾರೆ.

ಇಂದು ಸಿಎಂ ಕೆಸಿಆರ್ ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರವಾಹ ಸಂತ್ರಸ್ತರಿಗೆ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿ ಔಷಧಿ ಮತ್ತು ಆಹಾರ ಪೂರೈಸುವಂತೆ ಹಣಕಾಸು ಸಚಿವ ಹರೀಶ್ ರಾವ್ ಅವರಿಗೆ ಸಿಎಂ ಸೂಚಿಸಿದರು. ಗೋದಾವರಿ ನದಿಯಲ್ಲಿ ನಿರಂತರ ಪ್ರವಾಹದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಕುಟುಂಬಕ್ಕೆ ತಕ್ಷಣದ 10,000 ರೂ. : ಅತಿವೃಷ್ಟಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಸಾಂತ್ಯದವರೆಗೆ ಎಚ್ಚೆತ್ತುಕೊಳ್ಳಬೇಕು ಎಂದು ಸಿಎಂ ಕೆಸಿಆರ್ ತಾಕೀತು ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದ ಅಂಗವಾಗಿ, ಭದ್ರಾಚಲಂನಲ್ಲಿ ಸೇತುವೆಯ ಮೇಲಿಂದ ಗೋದಾವರಿ ಉಗಮವನ್ನು ವೀಕ್ಷಿಸಿದರು. ಹಾಗೆ ಐಟಿಡಿಎಯಲ್ಲಿ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಉನ್ನತ ಮಟ್ಟದ ಪರಿಶೀಲನೆ ನಡೆಸಿದರು.

ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳನ್ನು ಮುಂದುವರಿಸಲು ಆದೇಶಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ತಲಾ 10,000 ರೂಪಾಯಿ ಮತ್ತು 20 ಕೆಜಿ ಅಕ್ಕಿಯನ್ನು ತಕ್ಷಣವೇ ನೀಡಲಾಗುವುದು ಎಂದು ಕೆಸಿಆರ್ ಘೋಷಿಸಿದರು.

ಇದನ್ನೂ ಹಾಕಿ: ನವೀನ್ ಜಿಂದಾಲ್ ಭದ್ರತಾ ವಾಹನದ ಮೇಲೆ ದಾಳಿ ಆರೋಪ: ತಪ್ಪುದಾರಿಗೆಳೆಯುವ ವದಂತಿ ಎಂದ ಪೊಲೀಸರು

For All Latest Updates

TAGGED:

ABOUT THE AUTHOR

...view details