ಹೈದರಾಬಾದ್: 111 ವರ್ಷ ವಯಸ್ಸಿನ ಸಾಲುಮರದ ತಿಮ್ಮಕ್ಕರನ್ನು ತೆಲಂಗಾಣ ಸಿಎಂ ಸನ್ಮಾನ ಮಾಡಿ ಗೌರವಿಸಿದ್ದಾರೆ. ಮರಗಳನ್ನು ಉಳಿಸಿ, ಬೆಳೆಸಿದ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿದ ಸಿಎಂ ಚಂದ್ರಶೇಖರ್ ರಾವ್, ಶತಾಯುಷಿ ಸಾಲು ಮರದ ತಿಮ್ಮಕ್ಕನನ್ನು ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಈ ಸನ್ಮಾನ ಮಾಡಿ, ಶತಾಯುಷಿ ಪರಿಸರ ಪ್ರೇಮಿಯನ್ನು ಗುಣಗಾನ ಮಾಡಿದ್ದಾರೆ.
ಸಾಲುಮರದ ತಿಮ್ಮಕ್ಕನಿಗೆ ಗೌರವಿಸಿ ಸನ್ಮಾನಿಸಿದ ತೆಲಂಗಾಣ ಸಿಎಂ ತಿಮ್ಮಕ್ಕ ಅವರ 111ನೇ ಜನ್ಮ ದಿನಾಚರಣೆ ಬೆಂಗಳೂರಿನ ವಸಂತ ನಗರದಲ್ಲಿ ಇರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜೂನ್ 30, 2022ರಂದು ನಡೆಯಲಿದೆ. ಈ ಕುರಿತ ಕಿರು ಹೊತ್ತಿಗೆಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಜೀವನ ಹಾಗೂ ಸಾಧನೆಗಳನ್ನು ಸಮಗ್ರವಾಗಿ ವಿವರಿಸಲಾಗಿದೆ.
8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ ಅವುಗಳನ್ನು ಬೃಹತ್ ಮರಗಳನ್ನಾಗಿ ಮಾಡುವ ಮೂಲಕ ಪರಿಸರದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ತಿಮ್ಮಕ್ಕ ಕಾರಣೀಭೂತರಾಗಿದ್ದಾರೆ. ಈ ನಡುವೆ ತೆಲಂಗಾಣ ಸರ್ಕಾರ, ಹೈದರಾಬಾದ್ ಅನ್ನು ಹಸಿರೀಕರಣ ಮಾಡುತ್ತಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮ ಜಾರಿಗೆ ತಂದಿದ್ದು, ಹೆಚ್ಚು ಮರಗಳನ್ನು ಬೆಳೆಸಿ ಗಮನ ಸೆಳೆದಿದ್ದಾರೆ.
ಸಾಲುಮರದ ತಿಮ್ಮಕ್ಕನಿಗೆ ಗೌರವಿಸಿ ಸನ್ಮಾನಿಸಿದ ತೆಲಂಗಾಣ ಸಿಎಂ ಈ ಹಿನ್ನೆಲೆಯಲ್ಲಿ ಮರಗಳನ್ನು ಸಾಕಿ ಬೆಳೆಸಿದ ತಿಮ್ಮಕ್ಕಳನ್ನು ಹೈದರಾಬಾದ್ಗೆ ಕರೆಯಿಸಿ, ವಿಶೇಷ ಸಮಾರಂಭದಲ್ಲಿ ಸನ್ಮಾನ ಮಾಡಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.
ಇದನ್ನು ಓದಿ:ತಮಿಳುನಾಡಲ್ಲಿ ಕತ್ತೆಗಳ ಕೃಷಿ: ಡಿಮ್ಯಾಂಡಪ್ಪೋ ಡಿಮ್ಯಾಂಡ್.. ಲೀಟರ್ ಹಾಲಿಗೆ 7 ಸಾವಿರ ರೂ.ಬೆಲೆ