ರಾಜಣ್ಣ ಸಿರ್ಸಿಲ್ಲಾ(ತೆಲಂಗಾಣ): ಬಡವರಿಗಾಗಿ ನಿರ್ಮಿಸಿದ 1,320 ಫ್ಲ್ಯಾಟ್‌ಗಳನ್ನು ಉದ್ಘಾಟಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಭಾನುವಾರದಂದು ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲದ ಮಂಡೇಪಲ್ಲಿಗೆ ಆಗಮಿಸಿದ್ದರು. ಆದರೆ ಈ ವೇಳೆ ರಿಬ್ಬನ್ ಕತ್ತರಿಸಲು ಕತ್ತರಿ ಸಿಗದ ಕಾರಣ ಕೋಪಗೊಂಡ ಕೆಸಿಆರ್, ರಿಬ್ಬನ್ನ್ನು ಕಿತ್ತು ಬಿಸಾಕಿ ಒಳಹೋಗಿರುವ ಘಟನೆ ನಡೆದಿದೆ.
Video: ಕತ್ತರಿ ಸಿಗಲಿಲ್ಲ ಎಂದು ಕೋಪ.. ಉದ್ಘಾಟನಾ ರಿಬ್ಬನ್ ಕಿತ್ತು ಬಿಸಾಡಿದ ಸಿಎಂ ಕೆಸಿಆರ್! - Telangana
ಬಡವರಿಗಾಗಿ ನಿರ್ಮಿಸಿದ ಫ್ಲ್ಯಾಟ್‌ಗಳನ್ನು ಉದ್ಘಾಟಿಸಲು ಆಗಮಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ರಿಬ್ಬನ್ ಕತ್ತರಿಸಲು ಕತ್ತರಿ ಸಿಗದ ಕಾರಣ ಕೋಪಗೊಂಡು ಬಳಿಕ ರಿಬ್ಬನ್ನ್ನು ಕಿತ್ತು ಬಿಸಾಕಿ ಒಳಹೋಗಿರುವ ಘಟನೆ ನಡೆದಿದೆ.
ಕೋಪಗೊಂಡ ಸಿಎಂ ಕೆಸಿಆರ್
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಕೋಪಗೊಂಡ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.
"ಕೆಸಿಆರ್ ನಗರ" ಹೆಸರಿನ ವಸತಿ ಸಮುಚ್ಚಯವನ್ನು ಮಂಡೇಪಲ್ಲಿಯಲ್ಲಿ ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನಿರ್ಮಿಸಲಾದ ಪ್ರತಿಯೊಂದು ಫ್ಲ್ಯಾಟ್‌ಗಳಲ್ಲಿ 560 ಚದರ್ ಅಡಿ ವಿಸ್ತೀರ್ಣದಲ್ಲಿ ಎರಡು ಕೋಣೆಗಳು, ಸಾಮಾನ್ಯ ಸ್ನಾನಗೃಹ, ಹಾಲ್, ಅಡುಗೆಮನೆ ಮತ್ತು ಅಟ್ಯಾಚ್ಡ್ ಬಾತ್ರೂಂಗಳಿವೆ. ಕೆಸಿಆರ್ ನಗರದಲ್ಲಿ 5,000 ಜನರಿಗೆ ವಾಸಿಸಲು ಸೌಲಭ್ಯಗಳಿವೆ.
Last Updated : Jul 5, 2021, 11:08 AM IST