ಹೈದರಾಬಾದ್: ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಂಪುಟ ನಿರ್ಧರಿಸಿದೆ. ಕೊರೊನಾ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದ್ದು, ರಾಜ್ಯವ್ಯಾಪಿ ಅನ್ಲಾಕ್ಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಹಿರಿಯ ವೈದ್ಯಕೀಯ ತಂಡದ ವರದಿಯ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಲಾಕ್ಡೌನ್ ವೇಳೆ ವಿಧಿಸಲಾಗಿದ್ದ ಎಲ್ಲ ನಿಯಮಗಳನ್ನ ತೆರವುಗೊಳಿಸುವಂತೆ ಎಲ್ಲಾ ಇಲಾಖೆಗಳಿಗೂ ಸಂಪುಟ ಆದೇಶಿಸಿದೆ. ಜೊತೆಗೆ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಂದುವರಿಸುವಂತೆ ಸೂಚಿಸಲಾಗಿದೆ.
ಎಂದಿನಂತೆ ಎಲ್ಲಾ ಸೇವೆ ಲಭ್ಯ
ಲಾಕ್ಡೌನ್ ಸಮಯದಲ್ಲಿ ವಿಧಿಸಲಾದ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಕ್ಯಾಬಿನೆಟ್ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸರ್ಕಾರಿ ಕಚೇರಿಗಳು, ಬಸ್ಗಳು ಮತ್ತು ಮೆಟ್ರೋ ಸೇವೆಗಳು ಎಂದಿನಂತೆ ಸಂಚರಿಸಲಿವೆ. ಅಂತರರಾಜ್ಯ ಪ್ರಯಾಣ ಮತ್ತು ಬಸ್ ಸೇವೆಗಳಲ್ಲಿ ಇನ್ನೂ ಸ್ಪಷ್ಟತೆ ಬರಬೇಕಿದೆ. ಪ್ರಸ್ತುತ, ತೆಲಂಗಾಣದಾದ್ಯಂತ ಹಗಲು ಬಸ್ ಸೇವೆ ಲಭ್ಯವಿದೆ. ಅದೇ ರೀತಿ ಶಾಲೆಗಳು, ಕಾಲೇಜುಗಳು ಮತ್ತು ಚಿತ್ರಮಂದಿರಗಳನ್ನು ತೆರೆಯುವ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ.
ಲಾಕ್-ಡೌನ್ ತೆರವಾದರೂ ಜನರ ಅಗತ್ಯ ಬೆಂಬಲ ಬೇಕಿದೆ. ಕೊರೊನಾ ನಿರ್ಲಕ್ಷಿಸಬಾರದು ಎಂದು ಜನರಿಗೆ ಮನವಿ ಮಾಡಲಾಗಿದೆ. ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಜರ್ ಬಳಕೆ ಇತ್ಯಾದಿಗಳ ಪಾಲನೆಗೆ ಮನವಿ ಮಾಡಲಾಗಿದೆ.
ಓದಿ:3ನೇ ಅಲೆ ಎದುರಿಸುವುದು ಅನಿವಾರ್ಯ... 6-8 ವಾರಗಳಲ್ಲಿ ಅಪ್ಪಳಿಸಬಹುದು: ಏಮ್ಸ್ ಮುಖ್ಯಸ್ಥ