ಹೈದರಾಬಾದ್:ತೆಲಂಗಾಣದಲ್ಲಿಂದು ಕೆಸಿಆರ್ ನೇತೃತ್ವದ ರಾಜ್ಯ ಸರ್ಕಾರ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ ರೈತರ ಶ್ರೇಯೋಭಿವೃದ್ಧಿಗೋಸ್ಕರ ಭರ್ಜರಿ ಕೊಡುಗೆ ನೀಡಿದೆ.
ಬಜೆಟ್ ಮಂಡನೆ ಮಾಡಿರುವ ರಾಜ್ಯ ಹಣಕಾಸು ಸಚಿವ ಹರೀಶ್ ರಾವ್, ಮಾರ್ಚ್ವರೆಗೂ ರಾಜ್ಯದ ರೈತರು ಮಾಡಿರುವ 50 ಸಾವಿರ ರೂಗಿಂತಲೂ ಕಡಿಮೆ ಸಾಲ ಮನ್ನಾ ಮಾಡಲಾಗುವುದು. 2022-23ರಲ್ಲಿ ಬೆಳೆ ಸಾಲಕ್ಕಾಗಿ 16,144 ಕೋಟಿ ರೂ. ಮೀಸಲಿಡಲಾಗಿದ್ದು, ಒಟ್ಟು 5.12 ಲಕ್ಷ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಮುಂದಿನ ಆರ್ಥಿಕ ವರ್ಷದಲ್ಲಿ 75 ಸಾವಿರ ರೂ.ಗಿಂತಲೂ ಕಡಿಮೆ ಸಾಲ ಹೊಂದಿರುವವರ ಸಾಲ ಮನ್ನಾ ಮಾಡುವ ಭರವಸೆ ನೀಡಿದರು.
2022-23ನೇ ಸಾಲಿನ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ 24,254 ಕೋಟಿ ರೂ ಮೀಸಲಿಡಲಾಗಿದೆ ಎಂದಿರುವ ಸಚಿವರು, ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ಅಭಿವೃದ್ಧಿಗೋಸ್ಕರ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.