ಹೈದರಾಬಾದ್ :ತೆಲಂಗಾಣದ ಕ್ಷೌರಿಕ ಸಮುದಾಯವು ಫೆ.20ರಿಂದ ಬಿಜೆಪಿ ನಾಯಕರಿಗೆ ಹೇರ್ ಕಟ್ ಮಾಡುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಜಾತಿ ಆಧಾರಿತ ಉದ್ಯೋಗಗಳಿಗೆ ಧಕ್ಕೆ ಉಂಟಾಗಿದೆ.
ಅಲ್ಲದೇ ಸುಧಾರಣೆ ಮಾಡುವ ನೆಪದಲ್ಲಿ ನಮ್ಮಿಂದ ಮೋದಿ ಸರ್ಕಾರ ನಮ್ಮ ಆಹಾರವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಅಗಸ ಮತ್ತು ಕ್ಷೌರಿಕ ಸಂಘಗಳ ಮುಖಂಡರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ 250 ಯೂನಿಟ್ ಉಚಿತ ವಿದ್ಯುತ್ ಯೋಜನೆ ರದ್ದಾಗುವ ಭೀತಿ ಎದುರಾಗಿದೆ ಎಂದು ಸಂಘಗಳು ಹೇಳಿವೆ. ಈ ತಿಂಗಳ 20ರಿಂದ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಫೆ.20ರಿಂದ ಬಿಜೆಪಿ ನಾಯಕರಿಗೆ ಹೇರ್ ಕಟ್ ಮಾಡುವುದಿಲ್ಲ ಎಂದು ಕ್ಷೌರಿಕ ಸಂಘದ ಮುಖಂಡರು ಹೇಳಿದ್ದಾರೆ.