ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ಸಂಜೆ 5 ಗಂಟೆಯ ವೇಳೆಗೆ ಶೇಕಡಾ 64 ರಷ್ಟು ಮತದಾನವಾಗಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರದ ಸನಿಹಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅಂದಾಜಿಸಿವೆ.
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ತೆಲಂಗಾಣದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಪೋಲ್ ಟ್ರೆಂಡ್ಸ್ ಮತ್ತು ಸ್ಟ್ರಾಟಜಿ ಆರ್ಗನೈಸೇಶನ್ (ಪಿಟಿಎಸ್ ಗ್ರೂಪ್) ಬಿಡುಗಡೆ ಮಾಡಿದ ಎಕ್ಸಿಟ್ಪೋಲ್ ಸಮೀಕ್ಷೆಗಳು ಮತದಾರರು ಕಾಂಗ್ರೆಸ್‌ನತ್ತ ಹೆಚ್ಚು ವಾಲಿದ್ದಾರೆ ಎಂದು ಹೇಳಿದೆ. ವಿವರಗಳ ಪ್ರಕಾರ, ಆಡಳಿತಾರೂಢ ಬಿಆರ್‌ಎಸ್ 35 ರಿಂದ 40 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 65 ರಿಂದ 70 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ 7 ರಿಂದ 10 ಸ್ಥಾನಗಳನ್ನು ಗೆಲ್ಲಲಿದೆ ತಿಳಿಸಿದೆ. ಎಂಐಎಂ 6 ರಿಂದ 7 ಸ್ಥಾನ ಹಾಗೂ ಇತರರು 1-2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ಆರಾ ಮಸ್ತಾನ್ ಸಮೀಕ್ಷೆಯ ಪ್ರಕಾರ, ಬಿಆರ್‌ಎಸ್‌ಗೆ 41-49, ಕಾಂಗ್ರೆಸ್‌ಗೆ 58-67, ಬಿಜೆಪಿಗೆ 5-7 ಮತ್ತು ಇತರರು 7 ರಿಂದ 9 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಪಕ್ಷವಾರು ಮತ ಪ್ರಮಾಣದಲ್ಲಿ ಬಿಆರ್‌ಎಸ್‌ಗೆ ಶೇ.39.58, ಕಾಂಗ್ರೆಸ್‌ಗೆ ಶೇ.41.13, ಬಿಜೆಪಿಗೆ ಶೇ.10.47 ಮತ್ತು ಇತರರು ಶೇ.8.82 ರಷ್ಟು ಮತ ಪಡೆದಿದ್ದಾರೆ ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ಹೇಳಿವೆ.
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ಜಿಲ್ಲಾವಾರು ಪಕ್ಷಗಳ ಸಾಧನೆ ಏನಿರಬಹುದು?:ಜಿಲ್ಲಾವಾರು ಪೋಲ್ ಟು ಪೋಲ್ ಸಮೀಕ್ಷೆಗಳ ಪ್ರಕಾರ ಯಾವೆಲ್ಲಾ ಪಕ್ಷಗಳು, ಎಷ್ಟು ಸ್ಥಾನಗಳನ್ನು ಪಡೆದುಕೊಂಡಿವೆ ಎಂಬುದನ್ನು ಅಂದಾಜಿಸಿವೆ.
ಅದಿಲಾಬಾದ್:ಬಿಆರ್‌ಎಸ್ 3, ಕಾಂಗ್ರೆಸ್ 4 ರಿಂದ 6, ಬಿಜೆಪಿ 2 ರಿಂದ 4, ಇತರರು-ಒಂದು ಸ್ಥಾನ
ನಿಜಾಮಾಬಾದ್:ಬಿಆರ್‌ಎಸ್ 3 ರಿಂದ 5, ಕಾಂಗ್ರೆಸ್ 3 ರಿಂದ 4, ಬಿಜೆಪಿ 1 ರಿಂದ 2
ಕರೀಂನಗರ ಜಿಲ್ಲೆ:ಬಿಆರ್‌ಎಸ್ 2 ರಿಂದ 4, ಕಾಂಗ್ರೆಸ್ 9, ಬಿಜೆಪಿ 2
ಮೇದಕ್ ಜಿಲ್ಲೆ:ಬಿಆರ್‌ಎಸ್ 4 ರಿಂದ 6, ಕಾಂಗ್ರೆಸ್ 4 ರಿಂದ 6
ಮಹೆಬೂಬ್‌ನಗರ ಜಿಲ್ಲೆ:ಬಿಆರ್‌ಎಸ್ 2 ರಿಂದ 4, ಕಾಂಗ್ರೆಸ್ 9 ರಿಂದ 12
ರಂಗಾರೆಡ್ಡಿ ಜಿಲ್ಲೆ:ಬಿಆರ್‌ಎಸ್ 5 ರಿಂದ 7, ಕಾಂಗ್ರೆಸ್ 5 ರಿಂದ 7, ಬಿಜೆಪಿ 2
ಹೈದರಾಬಾದ್:ಬಿಆರ್‌ಎಸ್ 5 ರಿಂದ 7, ಕಾಂಗ್ರೆಸ್ 2 ರಿಂದ 4, ಬಿಜೆಪಿ 1 ರಿಂದ 2
ವಾರಂಗಲ್:ಬಿಆರ್‌ಎಸ್ 3 ರಿಂದ 5, ಕಾಂಗ್ರೆಸ್ 7 ರಿಂದ 9
ನಲ್ಗೊಂಡ: ಬಿಆರ್‌ಎಸ್ 3, ಕಾಂಗ್ರೆಸ್ 9 ರಿಂದ 11
ಖಮ್ಮಂ:ಬಿಆರ್‌ಎಸ್ 2, ಕಾಂಗ್ರೆಸ್ 7 ರಿಂದ 9, ಇತರರು 1
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ಎಕ್ಸಿಟ್ಪೋಲ್ ಸಮೀಕ್ಷೆಗೆ ಬಿಆರ್‌ಎಸ್ ಅಸಮಾಧಾನ:ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನ ಕೊನೆಯ ಹಂತದಲ್ಲಿರುವಾಗಲೇ ಎಕ್ಸಿಟ್ಪೋಲ್ ಸಮೀಕ್ಷೆಗಳನ್ನು ಬಹಿರಂಗ ಮಾಡಿದ್ದನ್ನು ಆಡಳಿತಾರೂಢ ಬಿಆರ್‌ಎಸ್ ನಾಯಕರು ಟೀಕಿಸಿದರು. ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಬಿಆರ್‌ಎಸ್ ವಿರುದ್ಧವಾಗಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ, ಪಕ್ಷದ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು, ಮತದಾನ ಇನ್ನೂ ಬಾಕಿ ಇರುವಾಗಲೇ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಪಕ್ಷದ ಕಾರ್ಯಕರ್ತರು ಯಾರೂ ಭಯಪಡುವ ಅಗತ್ಯವಿಲ್ಲ. 2018 ರಲ್ಲೂ ಇದೇ ರೀತಿಯ ಸಮೀಕ್ಷೆಗಳು ಬಂದಿದ್ದವು. ಆದರೆ, ಪಕ್ಷಕ್ಕೆ ಪೂರ್ಣ ಬಹುಮತ ಬಂದಿತ್ತು ಎಂದು ಹೇಳಿದರು.
ಸಿಎನ್ಎನ್ ಐಬಿಎನ್ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರ ಕಳೆದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೋಲಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿದ್ದವು. ಆಗ ಎಕ್ಸಿಟ್ಪೋಲ್ ಮುನ್ನೋಟಗಳೆಲ್ಲವೂ ಹುಸಿಯಾಗಿದ್ದವು. ಅಂದಿನ ಫಲಿತಾಂಶವೇ ಈ ಬಾರಿಯೂ ಪುನರಾವರ್ತನೆಯಾಗಲಿದೆ. 70 ಸ್ಥಾನ ಪಡೆದು ಹ್ಯಾಟ್ರಿಕ್ ಸಾಧಿಸುತ್ತೇವೆ. ಹೀಗಾಗಿ ಎಕ್ಸಿಟ್ ಪೋಲ್ ಬಗ್ಗೆ ಚಿಂತಿಸಬೇಡಿ ಎಂದು ಕಾರ್ಯಕರ್ತರಿಗೆ ಸಚಿವ ಕೆಟಿಆರ್ ಕಿವಿಮಾತು ಹೇಳಿದರು.
ಇದನ್ನೂ ಓದಿ:ತೆಲಂಗಾಣ ವಿಧಾನಸಭಾ ಚುನಾವಣೆ: ಎಲ್ಲ 119 ಕ್ಷೇತ್ರಗಳಲ್ಲಿ ಮತದಾನ