ಹೈದರಾಬಾದ್, ತೆಲಂಗಾಣ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಆರ್ಎಸ್ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಬಹುತೇಕ ಮುಗಿದಿದೆ. ಈ ಬಾರಿ ಬಹುತೇಕ ಶಾಸಕರಿಗೆ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಗೆಲ್ಲುವ ಕುದುರೆಗಳಿಗೆ ಗಾಳ ಹಾಕುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಆರ್ಎಸ್ ಪಕ್ಷದ ಕೆಲ ನಾಯಕ ಕಳೆದ ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಗೆದ್ದು ನಂತರ ಬಿಆರ್ಎಸ್ ಸೇರಿದವರನ್ನು ಮತ್ತು ಮೊದಲಿನಿಂದಲೂ ಪಕ್ಷದಲ್ಲಿದ್ದುಕೊಂಡು ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿರುವವರನ್ನು ಒಂದೆಡೆ ಕರೆಸಿ ಮಾತನಾಡುತ್ತಿದ್ದಾರೆ. ಮತ್ತೆ ಸರ್ಕಾರ ರಚನೆಯಾದಾಗ ಮತ್ತೊಂದು ಅವಕಾಶ ನಿಮಗೆ ನೀಡುತ್ತೇವೆ ಎಂದು ಅತೃಪ್ತರನ್ನು ಮನವೊಲಿಸುವ ಪ್ರಯತ್ನವನ್ನು ವರ್ಷಗಳಿಂದ ಮಾಡುತ್ತಿದ್ದಾರೆ.
ಟಿಕೆಟ್ ಸಿಗದವರ ಅಸಮಾಧಾನ ತಪ್ಪಿಸಲು ಸಚಿವರಾದ ಕೆಟಿಆರ್, ಹರೀಶ್ ರಾವ್ ಮೊದಲು ಮಾತನಾಡಿ ಆಮೇಲೆ ಅಗತ್ಯಕ್ಕೆ ತಕ್ಕಂತೆ ಸಿಎಂ ಕೆಸಿಆರ್ ಜತೆ ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಂಗಾರೆಡ್ಡಿ ಜಿಲ್ಲೆಯ ಇಬ್ಬರು ನಾಯಕರ ಜತೆ ಇದೇ ರೀತಿ ಚರ್ಚೆ ನಡೆಸಿ ಪಕ್ಷ ಬದಲಾಯಿಸದೇ ನೋಡಿದ್ದು ಗೊತ್ತಾಗಿದೆ. ಇದನ್ನು ಸರಿಪಡಿಸುವ ಪ್ರಯತ್ನ ಬಹುತೇಕ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದೆ ಎನ್ನುತ್ತವೆ ಪಕ್ಷದ ಮೂಲಗಳು. ಸಮಾಧಾನಪಡಿಸಿದರೂ ಆಯಾ ನಾಯಕರಲ್ಲಿ ಬದಲಾವಣೆ ಆಗದಿದ್ದರೆ, ಎರಡನೇ ಹಂತದ ನಾಯಕರ ಮೇಲೆ ಯಾವುದೇ ಪ್ರಭಾವ ಬೀರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅಖಾಡಕ್ಕಿಳಿದ ವರಿಷ್ಠರು: ಕಾಂಗ್ರೆಸ್ನ ಹಾಲಿ ಶಾಸಕರ ಜೊತೆಗೆ ಪ್ರಬಲ ಅಭ್ಯರ್ಥಿಗಳ ಮೇಲೆ ಬಿಆರ್ಎಸ್ ಕಣ್ಣಿಟ್ಟಿದೆ. ಕಳೆದ ಚುನಾವಣೆಯಲ್ಲಿ ಭದ್ರಾಚಲಂನಿಂದ ಬಿಆರ್ಎಸ್ ಪರವಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ತೆಲ್ಲಂ ವೆಂಕಟರಾವ್ ಇತ್ತೀಚೆಗೆ ಪೊಂಗುಲೇಟಿ ಅವರೊಂದಿಗೆ ಕಾಂಗ್ರೆಸ್ ಸೇರಿದ್ದರು. ವೆಂಕಟರಾವ್ ಅವರೊಂದಿಗೆ ಬಿಆರ್ಎಸ್ನ ಪ್ರಮುಖ ಮುಖಂಡರು ಸಮಾಲೋಚನೆ ನಡೆಸಿದ್ದರು. ಅವರು ಮತ್ತೆ ಬಿಆರ್ಎಸ್ ಪಕ್ಷಕ್ಕೆ ಬರಲು ನಿರ್ಧರಿಸಿದ್ದಾರೆ. ಇದು ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಬಿಆರ್ಎಸ್ ಮೂಲಗಳು ತಿಳಿಸಿವೆ.