ಹೈದರಾಬಾದ್: ಇಲ್ಲಿನ ಓಲ್ಡ್ ಸಿಟಿಯಲ್ಲಿರುವ ಅಂಗಡಿಯೊಂದರಲ್ಲಿ ಕೇವಲ ವಿಂಟೇಜ್ ಮತ್ತು ರೇಡಿಯೋ ಸೆಟ್‌ಗಳನ್ನು ಮಾತ್ರ ರಿಪೇರಿ ಮಾಡಲಾಗುತ್ತಿದೆ. ನಿಮ್ಮ ಮನೆಯಲ್ಲಿ ಹಳೆಯ ರೇಡಿಯೋ ಕೆಟ್ಟಿದ್ದಲ್ಲಿ ಇಲ್ಲಿ ರಿಪೇರಿ ಮಾಡಿಸಬಹುದಾಗಿದೆ.
ಹೌದು, ಸುಮಾರು 70 ವರ್ಷಗಳ ಹಿಂದೆ ಅಂದ್ರೆ 1948 ರಲ್ಲಿ ನಗರದ ಓಲ್ಡ್ ಸಿಟಿಯಲ್ಲಿ ವಿಂಟೇಜ್ ಮತ್ತು ರೇಡಿಯೋ ರಿಪೇರಿ ಅಂಗಡಿ ಓಪನ್ ಮಾಡಲಾಗಿತ್ತು. ಆಗಿನಿಂದಲೂ ಇಲ್ಲಿಯವರೆಗೆ ಇಲ್ಲಿ ಹಳೆಯ ರೇಡಿಯೋ ಮತ್ತು ವಿಂಟೇಜ್ ವಸ್ತುಗಳ ರಿಪೇರಿ ಮಾಡಲಾಗುತ್ತಿದೆ. ಈ ಹಳೆಯ ರೇಡಿಯೊ ರಿಪೇರಿ ಅಂಗಡಿಯೂ ಡಿಜಿಟಲ್ ಯುಗದಲ್ಲಿಯೂ ನಡೆಯುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
‘ಮಹಬೂದ್ ರೇಡಿಯೋ ಸರ್ವಿಸ್’ ಶಾಪ್ನ್ನು ಸಹೋದರರಾದ ಎಂಡಿ ಮೊಯಿನುದ್ದೀನ್ ಮತ್ತು ಎಂಡಿ ಮುಜೀಬುದ್ದೀನ್ ನಿರ್ವಹಿಸುತ್ತಿದ್ದಾರೆ. 70 ವರ್ಷಗಳ ಹಿಂದೆ ‘ಮಹಬೂಬ್ ರೇಡಿಯೋ ಸರ್ವಿಸ್’ ಅನ್ನು ಮೊಯಿನುದ್ದೀನ್ ಮತ್ತು ಮುಜೀಬುದ್ದೀನ್ ಅವರ ತಂದೆ ಶೇಖ್ ಮಹಬೂಬ್ ಸ್ಥಾಪಿಸಿದ್ದರು. ಈ ಸರ್ವಿಸ್ ಸೆಂಟರ್ನಲ್ಲಿ ಹಲವಾರು ದಶಕಗಳಿಂದ ವಿಂಟೇಜ್ ರೇಡಿಯೋ ಸೆಟ್‌ಗಳನ್ನು ರಿಪೇರಿ ಮಾಡಲಾಗುತ್ತಿದೆ.
ಈ ಅಂಗಡಿಯನ್ನು 70 ವರ್ಷಗಳ ಹಿಂದೆ ನನ್ನ ತಂದೆ ಸ್ಥಾಪಿಸಿದರು. ತಮ್ಮ ಹಳೆಯ ರೇಡಿಯೋಗಳನ್ನು ರಿಪೇರಿ ಮಾಡಿಸಲು ಭಾರತ, ಸೌದಿ ಅರೇಬಿಯಾ, ಯುಎಸ್ ಮತ್ತು ಇತರ ದೇಶಗಳಿಂದ ನಮ್ಮ ಬಳಿಗೆ ಬರುತ್ತಾರ ಎಂದು ಅಂಗಡಿ ಮಾಲೀಕ ಮೊಹಮ್ಮದ್ ಮೊಹಿಯುದ್ದೀನ್ ಹೇಳಿದ್ದಾರೆ.
ಒಟ್ಟಿನಲ್ಲಿ ಏನೇ ಆಗಲಿ ಕಲಿಯುಗ ಪ್ರಪಂಚದಲ್ಲಿ ಹಳೆಯ ರೇಡಿಯೋಗಳನ್ನು ಇಂದಿಗೂ ರಿಪೇರಿ ಮಾಡುತ್ತಾರೆಂದ್ರೆ ಅದು ಅಚ್ಚರಿಯೇ ಸರಿ.