ಹಯಾತ್‌ನಗರ: ಹೆತ್ತ ತನ್ನ ಮಗಳನ್ನೇ ಹಣಕ್ಕಾಗಿ ಬೇರಾಕೆಗೆ ಮಾರಿದ ಘಟನೆ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯನ್ನು ಕಳೆದ ವರ್ಷ ಏಪ್ರಿಲ್ನಲ್ಲಿ ಆಕೆಯ ತಾಯಿಯೆ ಬೇರೆ ಮಹಿಳೆಗೆ ಮಾರಾಟ ಮಾಡಿದ್ದಾಳೆ.
ಬಾಲಕಿಯನ್ನು ಖರೀದಿಸಿದ ಮಹಿಳೆ ಖಮ್ಮಂ ನಗರದ ವರಂಗಲ್ ಕ್ರಾಸ್ರೋಡ್ನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಪತಿಯೊಂದಿಗೆ ಸೇರಿ ಆಕೆಗೆ ವೇಶ್ಯಾವಾಟಿಕೆ ನಡೆಸುವಂತೆ ಒತ್ತಾಯಿಸಿ ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ವೇಶ್ಯಾವಾಟಿಕೆಗೆ ಬಲವಂತವಾಗಿ ಆಕೆಯನ್ನು ಬೇರೆ ಬೇರೆ ಊರುಗಳಿಗೆ ಕಳುಹಿಸುತ್ತಿದ್ದರು. ಇದರಿಂದ ಸತತ ಏಳು ತಿಂಗಳುಗಳ ಕಾಲ ಸಂತ್ರಸ್ತೆ ನರಕಯಾತನೆ ಅನುಭವಿಸಿದ್ದಾಳೆ.
ಕಳೆದ ತಿಂಗಳು ಈಕೆಯೊಂದಿಗೆ ಇವಳನ್ನು ಖರೀದಿಸಿದ ಪತಿ ಪತ್ನಿ ಇಬ್ಬರು ಜಗಳವಾಡಿ ಚಿನ್ನದ ಕಿವಿಯೋಲೆ, ಬೆಳ್ಳಿ ಬಳೆ, ನಗದನ್ನು ತೆಗೆದುಕೊಂಡದ್ದಲ್ಲದೆ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಹೇಗಾದರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಾಲಕಿ ಕೊನೆಗೂ ಖಮ್ಮಂ ಜಿಲ್ಲೆಯಿಂದ ತಪ್ಪಿಸಿಕೊಂಡು ನಗರವನ್ನು ತಲುಪಿ ತನ್ನ ಹಯಾತ್ನಗರದಲ್ಲಿ ಅಕ್ಕನ ಮನೆಗೆ ಬರುತ್ತಾಳೆ.