ವರಂಗಲ್ (ತೆಲಂಗಾಣ): ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ಮಾನಗೇಡಿ ಕೃತ್ಯಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಇಬ್ಬರು ಸಹೋದರರು ಸೇರಿಕೊಂಡು ಅತ್ಯಾಚಾರ ಎಸಗಿದ್ದು, ಈಗಾಗಲೇ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ದುಷ್ಕೃತ್ಯ ಎಸಗಿದ ಕಾಮುಕರ ಮನೆಗಳ ಮೇಲೆ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ದಾಳಿ ಮಾಡಿ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡು: ಪ್ರೇಯಸಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ದುರುಳ ಪ್ರೇಮಿ
ವರಂಗಲ್ ಪಟ್ಟಣದ ಆರೋಪಿಗಳಾದ ಅಜ್ಮದ್ ಅಲಿ (26) ಮತ್ತು ಅಬ್ಬು (22) ಎಂಬುವವರೇ ಬಂಧಿತರಾಗಿದ್ದಾರೆ. ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಸಂತ್ರಸ್ತ ಬಾಲಕಿಯು ಹತ್ತನೇ ತರಗತಿಯವರೆಗೆ ಓದಿದ್ದು, ಸದ್ಯ ಮನೆಯಲ್ಲೇ ಇರುತ್ತಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡು ಕಾಮುಕರು, ಇಲ್ಲಸಲ್ಲದನ್ನು ಹೇಳಿಕೊಂಡು ಆಕೆಯ ಸಂಪರ್ಕಕ್ಕೆ ಬಂದಿದ್ದರು ಎಂದು ಇಲ್ಲಿನ ಮಿಲ್ಸ್ ಕಾಲೋನಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ.
ಒಬ್ಬರದ್ದು ಮತ್ತೊಬ್ಬರಿಗೆ ಗೊತ್ತಾಗದಂತೆ ಕೃತ್ಯ:ಅಜ್ಮದ್ ಅಲಿ ಮತ್ತು ಅಬ್ಬು ಇಬ್ಬರೂ ಸಹ ಅಣ್ಣ - ತಮ್ಮಂದಿರಾಗಿದ್ದಾರೆ. ಇತ್ತ, ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ್ದ ಆರೋಪಿಗಳು, ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರು. ಆದರೆ, ಒಬ್ಬರದ್ದು ಮತ್ತೊಬ್ಬರಿಗೆ ತಿಳಿಯದಂತೆ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಐ ಹೇಳಿದ್ದಾರೆ.