ಮುಂಬೈ: ಜನಪ್ರಿಯ ಕಿರುತೆರೆ ಜೋಡಿ, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರ ಹೊಸ ರೊಮ್ಯಾಂಟಿಕ್ ಟ್ರ್ಯಾಕ್, ಶ್ರೇಯಾ ಘೋಷಾಲ್ ಮತ್ತು ಸ್ಟೆಬಿನ್ ಬೆನ್ ಹಾಡಿರುವ 'ಬಾರಿಶ್ ಆಯಿ ಹೈ' ಬಿಡುಗಡೆಯಾಗಿದೆ. ಬಿಗ್ ಬಾಸ್ 15ರ ರನ್ನರ್ - ಅಪ್ ಕರಣ್ ಕುಂದ್ರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಟೀಸರ್ ಹಂಚಿಕೊಂಡಿದ್ದು, 'ಆವೋ, ಪ್ಯಾರ್ ಬರ್ಸಾವೋ! ಬಹಳ ವಿಶೇಷವಾದ ಟ್ರ್ಯಾಕ್ ನಾವು ತೋರಿಸಿರುವ ಪ್ರೀತಿಯನ್ನು ನೀವೆಲ್ಲರೂ ಆನಂದಿಸುತ್ತೀರಿ ಎಂದು ಭಾವಿಸುತ್ತೇವೆ! # @vyrloriginals YouTube ಚಾನೆಲ್‌ನಲ್ಲಿ BaarishAayiHai ಔಟ್ ನೌ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಈ ಬಿಗ್ ಬಾಸ್ ಲವ್ ಬರ್ಡ್ಸ್, ಜನಪ್ರಿಯ ಸ್ಯಾಡ್-ರೊಮ್ಯಾಂಟಿಕ್ ಟ್ರ್ಯಾಕ್ 'ರುಲಾ ದೇತಿ ಹೈ' ನಂತರ ಇದು ಎರಡನೇ ಬಾರಿ ಜೊತೆಯಾಗಿ ಆನ್ಸ್ಕ್ರೀನ್ನಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ. ಅದಷ್ಟೇ ಅಲ್ಲದೆ ಕಿರುತೆರೆ ಕಲಾವಿದರಾದ ಮೊಹ್ಸಿನ್ ಖಾನ್ ಮತ್ತು ಜಾಸ್ಮಿನ್ ಭಾಸಿನ್ ಅವರ ಸೂಪರ್-ಹಿಟ್ ಟ್ರ್ಯಾಕ್ 'ಪ್ಯಾರ್ ಕರ್ತೆ ಹೋ ನಾ' ನಂತರ ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಸ್ಟೆಬಿನ್ ಬೆನ್ ಅವರೂ ಕೂಡ ಈ ಹಾಡಿನ ಮೂಲಕ ಎರಡನೇ ಬಾರಿಗೆ ಜೋಡಿಯಾಗಿ ಹಾಡಿದ್ದಾರೆ.