ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಪತ್ನಿ ರಾಜಶ್ರೀ ಯಾದವ್ ತಂದೆ-ತಾಯಿಯಾಗಿದ್ದಾರೆ. ಇಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದು, ಈ ಕುರಿತು ಟ್ವೀಟ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡ ತೇಜಸ್ವಿ ಯಾದವ್, "ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ನನಗೆ ಉಡುಗೊರೆ ಕಳುಹಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
2021ರ ಡಿಸೆಂಬರ್ 9ರಂದು ತೇಜಸ್ವಿ ಯಾದವ್ ಅವರು ತಮ್ಮ ಬಹುಕಾಲದ ಗೆಳತಿ ರಾಚೆಲ್ ಗೊಡಿನ್ಹೋ ಅವರನ್ನು ವಿವಾಹವಾದರು. ಮದುವೆಯ ಬಳಿಕ ರಾಚೆಲ್ ಅವರು ರಾಜಶ್ರೀ ಯಾದವ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ರಾಚೆಲ್ ಮೂಲತಃ ಹರಿಯಾಣದವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿ ವಾಸವಾಗಿದ್ದರು. ದೆಹಲಿಯ ಆರ್.ಕೆ.ಪುರಂನಲ್ಲಿರುವ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಯಾದವ್ ಮತ್ತು ರಾಜಶ್ರೀ ಯಾದವ್ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಮೊದಲಿನಿಂದಲೂ ಸ್ನೇಹಿತರಾಗಿದ್ದ ಅವರು, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ದಂಪತಿ ಮೊದಲ ಮಗುವನ್ನು ಕುಟುಂಬಕ್ಕೆ ಬರಮಾಡಿಕೊಂಡಿದ್ದು, ತೇಜಸ್ವಿ ಯಾದವ್ ತಂದೆಯಾದ ಬಳಿಕ ಅವರ ಕುಟುಂಬಸ್ಥರು ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳು ಮಗುವಿಗೆ ಆಶೀರ್ವಾದ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ :35 ವರ್ಷದ ನಂತ್ರ ಹೆಣ್ಣು ಮಗುವಿನ ಜನನ.. ಮನೆಗೆ ಕರೆತರಲು 4.5 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್!
ರಾಷ್ಟ್ರೀಯ ಜನತಾ ದಳದ ನಾಯಕನ ಸಹೋದರಿ ರೋಹಿಣಿ ಆಚಾರ್ಯ ಕೂಡ ಟ್ವಿಟರ್ನಲ್ಲಿ ತೇಜಸ್ವಿ ಯಾದವ್ ಅವರು ಮಗುವನ್ನು ಹಿಡಿದಿರುವ ಫೊಟೋವನ್ನು ಶೇರ್ ಮಾಡಿ, ನನ್ನ ಮನೆ ಈಗ ಸಂತೋಷದ ಕ್ಷಣದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಮಗುವಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ