ಪಾಟ್ನಾ(ಬಿಹಾರ): ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರ ವಿವಾಹ ನಿಶ್ಚಯವಾಗಿದೆ. ನಾಳೆ ತೇಜಸ್ವಿ ಯಾದವ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
ಯಾದವ್ ಕುಟುಂಬಸ್ಥರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಸಂಭ್ರಮ ಮನೆ ಮಾಡಿದೆ. ಆದರೆ ಮದುಮಗಳು ಯಾರೆಂಬುದು ಮಾತ್ರ ಇನ್ನೂ ನಿಗೂಢ. ಮೂಲಗಳ ಪ್ರಕಾರ, ತಮ್ಮ ಹಲವು ವರ್ಷಗಳ ಗೆಳತಿಯೊಂದಿಗೆ ತೇಜಸ್ವಿ ಯಾದವ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.