ಪಾಟ್ನಾ:ರಾಜ್ಯವು ಕೋವಿಡ್ ಎಂಬ ವಿಷ ವರ್ತುಲದಲ್ಲಿ ಸಿಲುಕಿದ್ದು, ಆರೋಗ್ಯ ಮಂತ್ರಿ ಮಂಗಲ್ ಪಾಂಡ್ಯ ಅವರನ್ನು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಿಂದ ಮುಕ್ತಗೊಳಿಸುವಂತೆ ರಾಷ್ಟ್ರೀಯ ಜನತಾದಳದ ಮುಖಂಡ ತೇಜಶ್ವಿ ಯಾದವ್ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆಪಿ ನಡ್ಡಾಗೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಹರಿದ್ವಾರ ಗಂಗಾ ಆರತಿಯಲ್ಲಿ ಭಾಗಿಯಾದ ಭಕ್ತರಲ್ಲಿ 1,700 ಜನರಿಗೆ ಕೋವಿಡ್ ಪಾಸಿಟಿವ್ !
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ತೇಜಶ್ವಿ ಯಾದವ್, ಬಿಹಾರ್ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸರಣಿ ಸಾವುಗಳಿಂದ ಜನ ತತ್ತರಿಸಿ ಹೋಗಿದ್ದು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸೂಕ್ತ ಆರೋಗ್ಯ ನೀಡಬೇಕಿದ್ದ ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಳದೊಂದಿಗೆ ಸಾವುಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಬ್ಬರು ಐಎಸ್ಎಸ್ ಅಧಿಕಾರಿಗಳು ಸೇರಿದಂತೆ ಹಲವರು ಕೊರೊನಾ ವೈರಸ್ಗೆ ಬಲಿಯಾಗಿದ್ದು ಈ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೇಜಶ್ವಿ ಯಾದವ್ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ರೋಗಿ ಬದುಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ: ಆಸ್ಪತ್ರೆ ಮಹಾ ಎಡವಟ್ಟು!
ಆರೋಗ್ಯ ಮಂತ್ರಿ ಮಂಗಲ್ ಪಾಂಡ್ಯ ಅವರನ್ನು ಚುನಾವಣಾ ಪ್ರಚಾರದಿಂದ ಬಿಡುಗಡೆ ಮಾಡಿ ಎಂದು ಟ್ವೀಟ್ ಮಾಡಿರುವ ತೇಜಶ್ವಿ ಯಾದವ್, ಬಿಹಾರದಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಸೇರಿದಂತೆ ಆರೋಗ್ಯಯುತ ಮೂಲಸೌಕರ್ಯವನ್ನು ವದಗಿಸಲು ಸಾಧ್ಯವಾಗಿಲ್ಲ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಈ ಸರ್ಕಾರ ಸಂಪೂರ್ಣ ಸೋತಿದೆ. ರೋಗಿಗಳಿಂದ ತುಂಬಿರುವ ಆಸ್ಪತ್ರೆಗಳನ್ನು ಪರಿಶೀಲಿಸುವಂತೆ ಒತ್ತಾಯ ಮಾಡಿದ್ದಾರೆ.