ಪಾಟ್ನಾ (ಬಿಹಾರ):ಇಂದು ಕೋವಿಡ್ ಪರಿಸ್ಥಿತಿ, ಲಸಿಕೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸರ್ವಪಕ್ಷ ಸಭೆ ನಡೆಸಿದ್ದರು. ಸಭೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ಕ್ಕೆ ಆಹ್ವಾನ ನೀಡಿರಲಿಲ್ಲವೆಂದು ಪಕ್ಷದ ನಾಯಕ ತೇಜಸ್ವಿ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿಯನ್ನು ಸರ್ವಪಕ್ಷ ಸಭೆಗೆ ನರೇಂದ್ರ ಮೋದಿ ಸರ್ಕಾರ ಆಹ್ವಾನಿಸಿಲ್ಲ. ಈ ಸಭೆ ಕೇವಲ ತೋರ್ಪಡಿಕೆಗಾಗಿ ಮಾಡಿದ್ದು ಬಿಟ್ಟರೆ ಬೇರೇನಕ್ಕೂ ಅಲ್ಲ" ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.