ಪಾಟ್ನಾ(ಬಿಹಾರ): ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಇದೀಗ ಹೊಸದೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.
ಪಾಟ್ನಾದ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡ್ತಿದ್ದ ಬಡ ಹುಡುಗಿಗೆ ಐಪೋನ್ ಉಡುಗೊರೆಯಾಗಿ ನೀಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಾಲಕಿಗೆ ಐಫೋನ್ ಗಿಫ್ಟ್ ನೀಡಿದ ತೇಜ್ ಪ್ರತಾಪ್ ಶನಿವಾರ ಈ ಘಟನೆ ನಡೆದಿದ್ದು, ಸಂಜೆ ವೇಳೆ ತೇಜ್ ಪ್ರತಾಪ್ ತನ್ನ ಸ್ನೇಹಿತರೊಂದಿಗೆ ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ರಸ್ತೆಯಲ್ಲಿ ಚಿಕ್ಕ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ತೆರಳಿರುವ ತೇಜ್ ಪ್ರತಾಪ್ ತಕ್ಷಣವೇ ಆಕೆಯ ಜೊತೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾನೆ.
ಇದನ್ನೂ ಓದಿರಿ:ಸಂಸತ್ ಅಧಿವೇಶನದ ವೇಳೆ ಮದ್ಯದ ಬಾಟಲಿ ಎತ್ತಿ ತೋರಿಸಿದ ಬಿಜೆಪಿ ಸಂಸದ.. ಕಾರಣ?
ಈ ವೇಳೆ ತನ್ನ ಮೊಬೈಲ್ ಸಂಖ್ಯೆಯನ್ನ ಬಾಲಕಿಗೆ ನೀಡಿ, ಅಗತ್ಯ ಸಹಾಯಕ್ಕಾಗಿ ಕರೆ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ, ಬಾಲಕಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ತಿಳಿಸಿದ್ದಾಳೆ. ಇದರ ಬೆನ್ನಲ್ಲೇ ಪಕ್ಕದ ಮೊಬೈಲ್ ಶಾಪ್ಗೆ ಬಾಲಕಿಯನ್ನ ಕರೆದುಕೊಂಡು ಹೋಗಿ 50 ಸಾವಿರ ರೂ. ಮೌಲ್ಯದ ಐಫೋನ್ ಗಿಪ್ಟ್ ಮಾಡಿದ್ದಾನೆ. ಈ ವೇಳೆ, ತನ್ನ ವಿದ್ಯಾಭ್ಯಾಸಕ್ಕಾಗಿ ಈ ಫೋನ್ ಬಳಕೆ ಮಾಡಿಕೊಳ್ಳುವ ಭರವಸೆ ನೀಡಿದ್ದಾಳೆ. ಬಾಲಕಿ ಮಾತಿನಿಂದ ಆಕರ್ಷಿತರಾದ ತೇಜ್ ಪ್ರತಾಪ್ ಯಾದವ್ ಅಗತ್ಯ ಸಹಾವಿದ್ದರೆ, ಫೋನ್ ಮಾಡುವಂತೆ ತಿಳಿಸಿದ್ದಾರೆ.