ಕರ್ನಾಟಕ

karnataka

ETV Bharat / bharat

16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.. ಬ್ಲ್ಯಾಕ್​ಮೇಲ್​ನಿಂದ ಬೇಸತ್ತ ಸಂತ್ರಸ್ತೆಯಿಂದ ದೂರು ದಾಖಲು - ಹರ್ಯಾಣದಲ್ಲಿ ಬಾಲಕಿ ಮೇಲೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ

ಊಟ ಮಾಡುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಘಟನೆ ಹರಿಯಾಣದ ಜಿಂದ್​ನಲ್ಲಿ ನಡೆದಿದೆ.

Teenager gang raped Jind, Teenager gang raped in Haryana, Teenager gang raped and blackmailed in Haryana, Haryana crime news,  ಜಿಂದ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಹರಿಯಾಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಹರ್ಯಾಣದಲ್ಲಿ ಬಾಲಕಿ ಮೇಲೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ, ಹರಿಯಾಣ ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ

By

Published : Jan 10, 2022, 7:31 AM IST

ಜಿಂದ್ (ಹರಿಯಾಣ):16 ವರ್ಷದ ಬಾಲಕಿ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ವರ್ಷ ಆಗಸ್ಟ್ 5 ರಂದು 11 ನೇ ತರಗತಿಯ ಬಾಲಕಿ ತನ್ನ ನೆರೆಹೊರೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಮಹಿಳೆ ಮನೆಗೆ ತೆರಳಿದ್ದಾಳೆ. ಆಕೆ ಮನೆಯಲ್ಲಿ ಊಟ ಮಾಡುತ್ತಿರುವಾಗ ಇಬ್ಬರು ಆರೋಪಿಗಳು ಆಕೆಯ ಊಟದ ತಟ್ಟೆ ಕಸಿದುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅತ್ಯಾಚಾರದ ವೇಳೆ ಆರೋಪಿಗಳು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಅಲ್ಲದೆ, ಈ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಹಾಗೂ ಹಣ ನೀಡುವಂತೆ ಜೀವ ಬೆದರಿಕೆಯ ಜೊತೆ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ.

ಓದಿ:ಇಂದಿನಿಂದ ಬೂಸ್ಟರ್​ ಡೋಸ್​ ಲಸಿಕಾ ಅಭಿಯಾನ... ರಾಜ್ಯದಲ್ಲಿ ಸಿಎಂರಿಂದ ಚಾಲನೆ

ಆರೋಪಿಗಳ ಬ್ಲ್ಯಾಕ್​ಮೇಲ್​ಗೆ ಹೆದರಿದ ಬಾಲಕಿ ಆರೋಪಿಗಳಿಗೆ ಅನೇಕ ಬಾರಿ ಹಣ ನೀಡಿದ್ದಾಳೆ. ಆದರೂ ಸಹ ಆರೋಪಿಗಳು ತನ್ನ ಬೇಡಿಕೆಯನ್ನು ಹೆಚ್ಚಿಸುತ್ತಲೇ ಇದ್ದರು. ಇದರಿಂದ ಬೇಸತ್ತ ಬಾಲಕಿ ಸುದ್ದಿ ಮನೆಯಲ್ಲಿ ತಿಳಿಸಿದ್ದಾರೆ. ಕೂಡಲೇ ಬಾಲಕಿಯ ತಾಯಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಕುರಿತು ತನಿಖೆ ಕೈಗೊಂಡ ಪೊಲೀಸರು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದರು. ಆರೋಪಿಗಳ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿದರು. ಈ ವಿಷಯದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details