ಕರ್ನಾಟಕ

karnataka

ETV Bharat / bharat

16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಸಂತ್ರಸ್ತೆಗೆ ಕಚ್ಚಿ ಹಲ್ಲೆ - ಲೈಂಗಿಕ ದೌರ್ಜನ್ಯ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ
16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ

By

Published : Aug 28, 2022, 7:52 PM IST

ಥಾಣೆ(ಮಹಾರಾಷ್ಟ್ರ): ಥಾಣೆ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಪರಾಧದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಲ್ಲಿ ಒಬ್ಬರು ಮರ್ಚೆಂಟ್ ನೇವಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ರೌಡಿ ಶೀಟರ್ ಆಗಿದ್ದು, ಆಗಸ್ಟ್ 26 ರಂದು ಈ ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶುಕ್ರವಾರ ಮಧ್ಯಾಹ್ನ ಈ ಮೂವರು ಕಿರಾತಕರು ಬಾಲಕಿಯನ್ನು ಭಿವಂಡಿಯ ಕಲ್ಹೇರ್‌ನಲ್ಲಿರುವ ಫ್ಲಾಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ. ಅದಕ್ಕೂ ಮೊದಲು ಆಕೆಯ ಕೈಗಳನ್ನು ಕಟ್ಟಿಹಾಕಿದ್ದಾರೆ. ಇದನ್ನು ವಿರೋಧಿಸಿದಾಗ ಬಾಲಕಿಗೆ ಕಚ್ಚಿ ಹಲ್ಲೆ ಮಾಡಲಾಗಿದೆ.

ಥಾಣೆ ನಗರದ ವಾಗ್ಲೆ ಎಸ್ಟೇಟ್ ವಿಭಾಗದ ಚಿತಾಲ್‌ಸರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಸಚಿನ್ ಕಾಂಬ್ಳೆ (30), ಆಕಾಶ್ ಕನೋಜಿಯಾ (22) ಮತ್ತು ಅಸು (20) ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ:ಬಿಯಾಂತ್ ಸಿಂಗ್ ಪ್ರತಿಮೆ ಮೇಲೆ ಖಲಿಸ್ತಾನ್ ಜಿಂದಾಬಾದ್ ಬರಹ.. ಪೊಲೀಸರಿಂದ ತನಿಖೆ ಚುರುಕು

ABOUT THE AUTHOR

...view details